ಭದ್ರತಾ ಲೋಪ : ಬೇಸರ ವ್ಯಕ್ತ ಪಡಿಸಿದ ಪ್ರಧಾನಿ

ಭದ್ರತೆಯಲ್ಲಿ ಉಂಟಾದ ಲೋಪ. ಭಟಿಂಡಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿ ಫಿರೋಜ್​ಪುರಕ್ಕೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಆ ರಸ್ತೆಯನ್ನು ಕೆಲವು ಪ್ರತಿಭಟನಾಕಾರರು ತಡೆದ ಕಾರಣ, ಪ್ರಧಾನಿ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳೆಲ್ಲ ಫ್ಲೈಓವರ್ ಮೇಲೆ 15-20ನಿಮಿಷ ನಿಲ್ಲುವಂತಾಯ್ತು. ಬಳಿಕ ಫಿರೋಜ್​ಪುರ ರ್ಯಾಲಿಯನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ವಾಪಸ್​ ಬಂದಿದ್ದಾರೆ.

ಪಂಜಾಬ್​ನ ಫಿರೋಜ್​ಪುರದಲ್ಲಿ ಆಯೋಜಿಸಲ್ಪಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಯವರ ರ್ಯಾಲಿ ಕೊನೇ ಕ್ಷಣದಲ್ಲಿ ರದ್ದಾಗಿದೆ.

ದೆಹಲಿಗೆ ವಾಪಸ್​ ಆಗಲು ಭಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಪ್ರಧಾನಿ ಮೋದಿ, ಕೋಪಗೊಂಡಿದ್ದು ಕಾಣುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಹಾಗೇ, ಅಲ್ಲಿ ಭದ್ರತೆ ಒದಗಿಸುವ ಸಲುವಾಗಿ ಇದ್ದ ಪಂಜಾಬ್​ ರಾಜ್ಯ ರಕ್ಷಣಾ ಅಧಿಕಾರಿಗಳಿಗೆ, ‘ನಿಮ್ಮ ಮುಖ್ಯಮಂತ್ರಿಗೆ ನನ್ನ ಧನ್ಯವಾದ ತಿಳಿಸಿ, ಕೊನೆಪಕ್ಷ ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೆ ಜೀವಂತವಾಗಿಯಾದರೂ ಬರುವಂತೆ ಮಾಡಿದರು’ ಎಂದು ಹೇಳಿದ್ದಾರೆ .

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page