ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಒಣಗುತ್ತಿರುವ ಕಬ್ಬು, ಬಾಳೆ, ಅಡಿಕೆ ಮತ್ತು ಇತರೆ ಬೆಳೆಗಳಿಗೆ ಹೇಮಾವತಿ ಜಲಾಶಯ ಯೋಜನೆಯ ಗೊರೂರು ಜಲಾಶಯದಿಂದ ನೀರು ಹರಿಸಿ ರೈತರನ್ನು ಸಂಕಷ್ಠದಿಂದ ಪಾರು ಮಾಡುವಂತೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಅವರ ಕಛೇರಿಗೆ ಮುತ್ತಿಗೆ ಹಾಕಿಒತ್ತಾಯಿಸಿದ ರೈತ ಮುಖಂಡರು ಕೃಷ್ಣರಾಜಸಾಗರ ಜಲಾಶಯದಿಂದ ಮಾತ್ರ ನೀರನ್ನು ಹರಿಸಿ ಗೊರೂರು ಜಲಾಶಯದ ವ್ಯಾಪ್ತಿಯ ರೈತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ರೈತಮುಖಂಡರಾದ ಮುದುಗೆರೆ ರಾಜೇಗೌಡ, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ತಾಲ್ಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಖಂಡಿಸಿ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.ಹೊಸಹೊಳಲು ಮೇಲ್ಗಾಲುವೆ ಕಾಮಗಾರಿಯು ನೆನಗುದಿಗೆ ಬಿದ್ದಿದೆ, ಕಾಲುವೆ ನಿರ್ಮಾಣ ಮಾಡಲು ಭೂಮಿಯನ್ನು ಕಳೆದುಕೊಂಡಿರುವ ಕೆಲವು ರೈತರಿಗೆ ಈವರೆವಿಗೂ ಪರಿಹಾರ ಕೊಟ್ಟಿಲ್ಲ.ವರ್ಷವಿಡೀ ಕಷ್ಟಪಟ್ಟು ಬೆಳೆದ ರೈತನ ಬೆಳೆಗಳು ಒಣಗಿ ರೈತನ ಕಣ್ಣಿನ ಮುಂದೆಯೇ ಹಾಳಾಗುತ್ತಿರುವುದರಿಂದ ರೈತರ ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯ ವ್ಯಾಪ್ತಿಯ ರೈತರ ನೋವು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲವೇ ಎಂದು ರಾಜೇಗೌಡ ತರಾಟೆಗೆ ತೆಗೆದುಕೊಂಡರು.ಕಳೆದ ಒಂದುವರ್ಷದಿಂದ ಖಾಲಿಯಿದ್ದ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಇದೀಗ ತಾನೆವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕರಿಸಿರುವುದರಿಂದ ಮಾಹಿತಿಯ ಕೊರತೆಯಿಂದಾಗಿ ರೈತರ ಪ್ರಶ್ನೆಗೆ ಇಇ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಉತ್ತರ ನೀಡಲು ತಡಬಡಾಯಿಸಿದರು.ಎಇಇ ಎಸ್.ಇ.ನಿಂಗಪ್ಪ, ಸಹಾಯಕ ಎಂಜಿನಿಯರುಗಳಾದ ಅಶೋಕ್, ಮುರುಳಿ, ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು .ರೈತರ ನಿಯೋಗದಲ್ಲಿ ಬೂಕನಕೆರೆ ನಾಗರಾಜು, ಬಂಡಿಹೊಳೆ ನಾಗರಾಜು, ಕರೋಟಿ ತಮ್ಮಯ್ಯ, ನೀತಿಮಂಗಲ ಮಹೇಶ್, ಚೌಡೇನಹಳ್ಳಿ ತಮ್ಮೇಗೌಡ ಸೇರಿದಂತೆ ನೂರಾರು ರೈತರು ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





