Breaking News

ಪಂಚಮಸಾಲಿ ಹಿತ ಕಾಪಾಡುತ್ತಾರೋ ಅವರೇ ಮುಂದಿನ ಸಿಎಂ ಅಗುತ್ತಾರೆ

ಧಾರವಾಡ: ಈಗಾಗಲೇ ಪಂಚಾಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಾ ಬಂದಿದೆ. ಇದರ ಕುರಿತು ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ‌ ಅವರು ಕೂಡಾ ಧ್ವನಿ ಎತ್ತಿದ್ದಾರೆ. ಇವರ ಹೊರತು ಯಾರು ಕೂಡಾ ಸದನದಲ್ಲಿ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಿರಲಿಲ್ಲ. ಈಗ ನಮ್ಮ ಸಮುದಾಯವರೇ ಸಿಎಂ ಆಗಿದ್ದಾರೆ. ಅವರು ಸಮುದಾಯದ ಹಿತ ಕಾಪಾಡುತ್ತಾರೆ ಎಂದು ಅಂದುಕೊಂಡಿದ್ದೇವೆ, ನೋಡೋಣ. ಯಾರು ಬಹು ಸಂಖ್ಯಾತ ಸಮುದಾಯವಾದ ಪಂಚಮಸಾಲಿ ಹಿತ ಕಾಪಾಡುತ್ತಾರೋ ಅವರೇ ಮುಂದಿನ ಸಿಎಂ ಅಗುತ್ತಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ ಅವರು ಮುಂಚೂಣಿಯಲ್ಲಿದ್ದಾರೆ. ಅವರ ಬಗ್ಗೆ ಸಮುದಾಯದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಯಾರೇ ನಮ್ಮವರು ಮುಖ್ಯಮಂತ್ರಿಯಾಗಲಿ ಅವರು ಸಮುದಾಯದ ಹಿತ ಕಾಪಾಡಬೇಕು, ಆಗ ಸಮುದಾಯವು ಅವರನ್ನು ಕಾಪಾಡುತ್ತದೆ. ಆಡಳಿತರೋಢ ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ್ ಅವರು ಮೀಸಲಾತಿ ಹೋರಾಟದಲ್ಲಿ ತುಂಬಾ ಪ್ರಮುಖ ಪಾತ್ರವಹಿಸಿದ್ದಾರೆ. ಇವರ ಜೊತೆಗೆ ಬೆಲ್ಲದ್ ,ಮುನೇನಕೊಪ್ಪ, ಸಿದ್ದು ಸವದಿ, ಇವರೆಲ್ಲರೂ ಕೂಡಾ ಸರ್ಕಾರದಲ್ಲಿ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದರು.

ಈ ಮೀಸಲಾತಿ ಹೋರಾಟದಲ್ಲಿ ವಿಜಯನಾಂನದ ಕಾಶಪ್ಪನವರ, ವಿನಯ ಕುಲಕರ್ಣಿ ಸೇರಿದಂತೆ ‌ಹಲವು ಪ್ರಮುಖರಿದ್ದಾರೆ, ಅವರೆಲ್ಲರನ್ನು ಸಮಾಜ ಎಂದುಗೂ ಕೈ ಬೀಡುವುದಿಲ್ಲ ಎಂದು ತಿಳಿಸಿದರು.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *