“ಟಗರು’ ಚಿತ್ರದ ಸಕ್ಸಸ್ ಬಳಿಕ ಮತ್ತೂಮ್ಮೆ ನಟ ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಕೂಡ ಎರಡು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಟ ಶಿವರಾಜಕುಮಾರ್ ಹುಟ್ಟುಹಬ್ಬದ ವೇಳೆ ಬೈರಾಗಿ ಬಿಡುಗಡೆಯಾಗಲಿದೆ.
ತನ್ನ ಟೈಟಲ್ ಮತ್ತು ಫಸ್ಟ್‌ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 123ನೇ ಚಿತ್ರ “ಬೈರಾಗಿ’ಯ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.
ಈ ವಾರಾಂತ್ಯದಲ್ಲಿ “ಭೈರಾಗಿ’ಯ ಚಿತ್ರೀಕರಣ ಪೂರ್ಣವಾಗಲಿದ್ದು, ಇದರ ನಡುವೆಯೇ ಚಿತ್ರದಲ್ಲಿ ಶಿವಣ್ಣ ಅವರ ಮತ್ತೂಂದು ಹೊಸ ಲುಕ್‌ನಲ್ಲಿರುವ ಪೋಟೋ ಹೊರಬಿದ್ದಿದೆ.
ಈ ಪೋಟೋದಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರುವ ಶಿವಣ್ಣ ಬ್ಲ್ಯಾಕ್ ಡ್ರೆಸ್ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಶಿವಣ್ಣ ಪಾತ್ರ ಮತ್ತಷ್ಟು ಕುತೂಹಲ ಮೂಡಿಸುವಂತಿದೆ. ತಮಿಳಿನ ಖ್ಯಾತ ಛಾಯಾಗ್ರಹಕ ಮತ್ತು ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಬೈರಾಗಿ’ ಚಿತ್ರಕ್ಕೆ ಈಗಾಗಲೇ ಬರೋಬ್ಬರಿ ನೂರಕ್ಕೂ ಹೆಚ್ಚು ದಿನಗಳ ಶೂಟಿಂಗ್ ನಡೆಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

