ನವದೆಹಲಿ :ವಂಚಕರು ಹೊಸ ರೀತಿಯಲ್ಲಿ ಜನರನ್ನ ಮೋಸಗೊಳಿಸಲು ಯತ್ನಿಸುತ್ತಿದ್ದಾರೆ. ಸಧ್ಯ ಕೊರೊನಾದ 3ನೇ ಅಲೆಯಲ್ಲಿ, ಸೈಬರ್ ದರೋಡೆಕೋರರು ಬೂಸ್ಟರ್ ಡೋಸ್ ಹೆಸರಿನಲ್ಲಿ ಮೋಸ ಮಾಡಲು ಪ್ರಾರಂಭಿಸಿದ್ದಾರೆ.
ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.
ಬೂಸ್ಟರ್ ಡೋಸ್ ಕೊಡಿಸುವ ಹೆಸರಿನಲ್ಲಿ ಪುಂಡರು ಜನರನ್ನ ಬಲಿಪಶುಗಳನ್ನಾಗಿಸಲು ಮಾಡುತ್ತಿದ್ದಾರೆ. ಅವ್ರು ಬೂಸ್ಟರ್ ಡೋಸ್‌ಗಾಗಿ ನೋಂದಾಯಿಸುವ ನೆಪದಲ್ಲಿ ಜನರಿಗೆ ಕರೆ ಮಾಡಿ OTP ಸಂಖ್ಯೆಗಳನ್ನ ಕೇಳುತ್ತಾರೆ ಮತ್ತು ಅದರ ಮೂಲಕ ಅವ್ರು ತಮ್ಮ ಬ್ಯಾಂಕ್ ಖಾತೆಗಳನ್ನ ಖಾಲಿ ಮಾಡುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

