ಚಾಮರಾಜನಗರ : ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದೆ. ಅಲ್ಲದೇ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಕೆಲ ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ನಡೆಸಬೇಕೆಂದು ಒತ್ತಾಯಿಸಿ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಎಷ್ಟೇ ತಿಳಿ ಹೇಳಿದರೂ ಮಕ್ಕಳಿಗೆ ಭೌತಿಕ ಅಂತರ ಕಾಪಾಡಬೇಕೆಂಬ ಪರಿವೆ ಇರುವುದಿಲ್ಲ. ಆಟಕ್ಕೆ ಬಿಟ್ಟಾಗ ಜೊತೆಯಾಗುತ್ತಾರೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು ಹರಡಬಹುದು. ಆ ಮಗುವಿನಿಂದ ಮನೆಯ ಹಿರಿಯರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಪಾಸಿಟಿವಿಟಿ ದರ ಇಳಿಕೆ ಆಗುವವರೆಗೆ ಶಾಲೆಗೆ ರಜೆ
ನೀಡಬೇಕು ಎಂದು ಪೋಷಕರು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

