Breaking News

ವೃದ್ಧಾಪ್ಯದಲ್ಲಿ ಆಸರೆಯಾದ 65 ವರ್ಷದ ಮಹಿಳೆ : ಮೈಸೂರುಲ್ಲಿ ಅಪರೂಪದ ನಿಖಾ



ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ
65 ವರ್ಷದ ಮಹಿಳೆ ಮದುವೆ ಮಾಡಿಸಿದ್ದಾರೆ.ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿರುವ  ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ ಮುಸ್ತಫಾ ಒಂಟಿಯಾಗಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ಮೃತಪಟ್ಟಿದ್ದರಿಂದ ಒಂಟಿಯಾಗಿ ಇರಬೇಕಾಗಿತ್ತು. ಆದ್ದರಿಂದ ಇಳಿ ವಯಸ್ಸಿನಲ್ಲಿ ಜತೆಯಾಗಿ ಯಾರಾದರೂ ಆಸರೆಗೆ ಬೇಕು ಎನ್ನಿಸಿತು. ನಂತರ ಮಕ್ಕಳು, ಮೊಮ್ಮಕ್ಕಳು ‘ವಧು’ವಿನ ಹುಡುಕಾಟದಲ್ಲಿ ತೊಡಗಿದಾಗ ಒಂಟಿಯಾಗಿದ್ದ 65 ವರ್ಷದ ಫಾತಿಮಾ ಬೇಗಂ ಸಿಕ್ಕರು. ಅವರು ಕೂಡ ಮದುವೆಗೆ ಒಪ್ಪಿದ್ದರಿಂದ ನಿಖಾ ಮಾಡಲಾಗಿದೆ.

Share News

About admin

Check Also

ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!

ತುಮಕೂರು: ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ಗಿಡ …

Leave a Reply

Your email address will not be published. Required fields are marked *