ಕನ್ನಡದ ಪ್ರಮುಖ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗರಿಮೆ ಸಂದಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ “ಹಾರ್ಟ್ ಲ್ಯಾಂಪ್”ಗೆ ಈ ಪ್ರಶಸ್ತಿ ಸಂದಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ, ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.ಕೆಲವೇ ದಿನಗಳ ಹಿಂದೆ ಬೂಕರ್ ಪ್ರಶಸ್ತಿ ನನಗೆ ಸಿಗಲೆಂದು ಪ್ರಾರ್ಥಿಸಿ ಎಂದು ಮುಷ್ತಾಕ್ ಅವರು ಹೇಳಿದ್ದರು. ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿನ 6 ಪ್ರಮುಖ ಕೃತಿಗಳಲ್ಲಿ ಅವರ ಹಾರ್ಟ್ ಲ್ಯಾಂಪ್ ಕಥಾಗುಚ್ಛವೂ ಒಂದಾಗಿತ್ತು. ಪ್ಲೀಸ್.. ಪ್ರೇ ಫಾರ್ ಮೀ… ನನಗಾಗಿ ಪ್ರಾರ್ಥಿಸಿ ಅಂತ ವಿನಮ್ರವಾಗಿ ಅವರು ಹೇಳಿದ್ದರು. ಮುಷ್ತಾಕ್ ಅವರ ಪರಿಶ್ರಮ ಹಾಗೂ ಕಲೆಯೊಂದಿಗೆ, ಕನ್ನಡಿಗರ ಪ್ರಾರ್ಥನೆಯೂ ಸೇರಿದೆ ಎನ್ನುವಂತೆ ಅವರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡದ ಕೃತಿಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ.ಬೂಕರ್ ಪ್ರಶಸ್ತಿ ಎನ್ನುವುದು ಪ್ರತಿ ಸಾಹಿತಿಯ ಕನಸು. ಬೂಕರ್ ಪ್ರಶಸ್ತಿಯ ಕನಸನ್ನು ಕನ್ನಡಿಗರೂ ಕಂಡಿದ್ದರು. ಅದು ಮೊದಲ ಬಾರಿ ಈಡೇರಿದೆ. ಇದರೊಂದಿಗೆ ಕನ್ನಡದ ಕೃತಿಯೊಂದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಗೌರವ ಸಂದಿದೆ. ಪ್ರಶಸ್ತಿಯ ಮೊತ್ತವು ಅಂದಾಜು 57.28 ಲಕ್ಷ ರೂಪಾಯಿ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

