Breaking News

ಒಮಿಕ್ರಾನ್ ಹಾವಳಿ ನಡುವೆ ಮತ್ತೇ ಹೊಸ ವೈರಸ್ ಉದ್ಭವ



ದೇಶದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್ ಸಂಚಲನ ಮೂಡಿಸುತ್ತಿದೆ. ಇದರ ಮದ್ಯೆ ಇದೀಗ ಇದರ ಉಪಪ್ರಭೇದವಾಗಿರುವ BA2 ವೈರಸ್ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಮಧ್ಯಪ್ರದೇಶದ ಇಂದೋರ್​​ನಲ್ಲಿ ಆರು ಮಕ್ಕಳು ಸೇರಿದಂತೆ 16 ಮಂದಿಯಲ್ಲಿ ಒಮಿಕ್ರಾನ್​ ಉಪ ಪ್ರಭೇದವಾಗಿರುವ BA2 ಪತ್ತೆಯಾಗಿದೆ.

ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವವರಲ್ಲಿ BA2 ರೋಗ ಲಕ್ಷಣಗಳು ಇದ್ದು, ಇದರಿಂದ ಯಾವುದೇ ರೀತಿಯ ಹೆಚ್ಚಿನ ತೊಂದರೆ ಇಲ್ಲವೆಂದು ತಿಳಿದುಬಂದಿದೆ. ಇನ್ನು BA2 ಸೋಂಕು ಕಾಣಿಸಿಕೊಂಡಿರುವ ಮೂವರು ವಯಸ್ಕರರಿಗೆ ಈಗಾಗಲೇ ಕೋವಿಡ್​ ಲಸಿಕೆ ನೀಡಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಬೂಸ್ಟರ್ ಡೋಸ್ ಸಹ ಪಡೆದುಕೊಂಡಿದ್ದಾರೆ. ಹೀಗಾಗಿ ಶ್ವಾಸಕೋಶದಲ್ಲಿ ಶೇ. 5ರಷ್ಟು ಸೋಂಕು ಮಾತ್ರ ಕಾಣಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *