Breaking News

ಮನೆಯಿಂದ ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕ ಶಿಕ್ಷೆ ನೀಡಿದ ಕೋರ್ಟ್

ಚಿಕ್ಕಬಳ್ಳಾಪುರ: ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿ ಅವರನ್ನು ಮಗ ಎಂ.ಸುಭಾಷ್ ಮತ್ತು ಸೊಸೆ ಮಂಜುಳಾ ಬಲವಂತಾಗಿ ಮನೆಯಿಂದ ಹೊರಹಾಕಿದ್ದರು. ನೊಂದ ತಂದೆ ಕೋರ್ಟ್ ಮೆಟ್ಟಿಲು ಏರಿದ್ದರು. ಅದರ ತಕ್ಕ ಪ್ರತಿಫಲವಾಗಿ
ಮನೆಯಿಂದ ಮಗನನ್ನೇ ಹೊರಹಾಕುವಂತೆ ಕೋರ್ಟ್​ ಪೊಲೀಸರಿಗೆ ಸೂಚನೆ ನೀಡಿದೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ನಡೆದಿದೆ.

ಕೋರ್ಟ್​ನ ಆದೇಶದಂತೆ ಮಗ ಮತ್ತು ಸೊಸೆಯನ್ನ ಹೊರಹಾಕಿರುವ ಚಿಂತಾಮಣಿ ಪೊಲೀಸರು ಮುನಿಸ್ವಾಮಿಗೆ ಪ್ರವೇಶ ಕಲ್ಪಿಸಿದ್ದಾರೆ. ಮನೆಯಿಂದ ಹೊರಹಾಕಿದ್ದಕ್ಕೆ ಮುನಿಸ್ವಾಮಿ ವಿರುದ್ಧ ಮಗ ಮತ್ತು ಸೊಸೆ ಹಿಡಿಶಾಪ ಹಾಕಿದ್ದಾರೆ. ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದೆ. 

Share News

About admin

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *