Breaking News
Featured Video Play Icon

ವಸ್ತುನಿಷ್ಠ ವರದಿಗೆ ಶಾಸಕರ ಅಭಿನಂದನೆ: ಪೊಲೀಸರ ವಿರುದ್ಧದ ಸತ್ಯ ಸುಳ್ಳಾಗಲ್ಲ..! ಸತ್ಯ ಯಾವತ್ತಿಗೂ ಸುಳ್ಳಾಗಲ್ಲ ಅಲರ್ಟ್ .! ಅಲರ್ಟ್..!

ಬಿಗ್ ಟಿವಿ ವರದಿಗೆ ಎಚ್ಚೆತ್ತ ಪೊಲೀಸ್ ಕಮೀಷನರ್….ಸುಳ್ಳು ಪ್ರಕರಣ ಮಾಡಿದ ಅಧಿಕಾರಿಗಳ ವಿರುದ್ಧ ತನಿಖೆ ಮಾಡಲು ಮುಂದಾದ ಕಮೀಷನರ್ ರೇಣುಕಾ ಸುಕುಮಾರ….ಸುದ್ದಿಗೆ ಖಾಕಿ ಅಲರ್ಟ್..

ಕಸಭಾ ಪೊಲೀಸ್ ಠಾಣೆಯಲ್ಲಿ ನಡೆದ ಕರ್ಮ ಕಾಂಡ…?

ಹುಬ್ಬಳ್ಳಿ: ವಸ್ತುನಿಷ್ಠ ವರದಿಗಳನ್ನು ಮಾಡುವ ಮೂಲಕ ಮಾಧ್ಯಮಗಳು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಓಸಿ ಮಟ್ಕಾ ಆಡುವರನ್ನು ಸಂರಕ್ಷಣೆ ಮಾಡುವುದು ಪೊಲೀಸ್ ಇಲಾಖೆಯ ಕೆಲಸ ಅಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.

ಬಿಗ್ ಟಿವಿಯ ವಿಶೇಷ ವರದಿಯ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪೊಲೀಸ್ ಆಯುಕ್ತರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಅವಳಿನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮ ವಸ್ತುನಿಷ್ಠ ವರದಿ ಮಾಡಿದೆ. ತಪ್ಪು ಯಾರೇ ಮಾಡಿದರೂ ತಪ್ಪು ತಪ್ಪೇ. ಅದು ಪೊಲೀಸರೇ ಆಗಿರಲಿ, ಸಾರ್ವಜನಿಕರೇ ಆಗಿರಲಿ ಎಂದರು.

ಕೆಲವೊಂದು ಪ್ರಕರಣಗಳಲ್ಲಿ ಪೊಲೀಸರು ಶಾಮೀಲಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹೆಚ್ಚಿನ ಕಾಳಜಿ ವಹಿಸಿ ಅಕ್ರಮಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.

ಇನ್ನೂ ಪೊಲೀಸರು ತಪ್ಪು ಮಾಡುವುದಿಲ್ಲವೇ. ಪೊಲೀಸರು ತಪ್ಪು ಮಾಡಿದಾಗ ವಸ್ತುನಿಷ್ಠ ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿ ಹೀಗಿದ್ದಾಗ ಪೊಲೀಸ್ ಇಲಾಖೆ ಮಾಧ್ಯಮದ ಕಾರ್ಯಕ್ಷಮತೆಗೆ ಚ್ಯುತಿ ತರುವ ಕಾರ್ಯವನ್ನು ಮಾಡಬಾರದು ಈ ಪ್ರಕರಣ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು….

Share News

About Shaikh BigTv

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *