ಕುಷ್ಟಗಿ: ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ. ತೋಟಮ್ಮ ಕಲಕಬಂಡಿ ನಿಧನ ಹೊಂದಿ 4 ತಿಂಗಳು ಕಳೆದಿದೆ. ಕಳೆದ 9ನೇ ಸೆಪ್ಟೇಬರ್ 2021ರಂದು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಇದೀಗ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿರುವ ಮೆಸೇಜ್ ಬಂದಿದೆ.
ತೋಟಮ್ಮ ಕಲಕಬಂಡಿ ಪುರಸಭೆ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರ ಪುತ್ರ ಅಮರೇಶ ಕಲಕಬಂಡಿ ಅವರ ಮೊಬೈಲ್ ಗೆ ಎರಡನೇ ಡೋಸ್ ಲಸಿಕೆ ತೋಟಮ್ಮ ಅವರಿಗೆ ಯಶಸ್ವಿಯಾಗಿರುವ ಮೆಸೇಜ್ ಬಂದಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಈ ರೀತಿ ಮೆಸೇಜ್ ಗಳು ಬಂದರೆ ಹಾಕಿಸಿಕೊಳ್ಳದವರಿಗೆ ವರದಾನವಾಗುವುದರಲ್ಲಿ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದ ಆರೋಗ್ಯ ಇಲಾಖೆ ಈ ರೀತಿಯ ಯಡವಟ್ಟುಗಳನ್ನು ಮಾಡದಂತೆ ಅಮರೇಶ ಕಲಕಬಂಡಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

