Breaking News

ಇಬ್ರಾಹಿಂ ಬಹಳ ಸೀನಿಯರ್ ಲೀಡರ್, ಎಲ್ಲಾ ಪಕ್ಷದಲ್ಲಿ ಮುನಿಸು ಇದ್ದೆ ಇರುತ್ತೆ : ಡಿಕೆಶಿ


ನಮ್ಮ ಇಬ್ರಾಹಿಂ ಬಹಳ ಸೀನಿಯರ್ ಲೀಡರ್, ಸಿದ್ದರಾಮಯ್ಯನವರ ಕಾಲದಲ್ಲಿ ಸಿಟ್ಟಿಂಗ್ ಎಂಎಲ್‌ಎ ತೆಗೆದು ಟಿಕೆಟ್ ಕೊಡಿಸಿದ್ದರು, ಸೋತ ಮೇಲೂ ಕ್ಯಾಬಿನೆಟ್ ಸ್ಟೇಟಸ್ ಕೊಟ್ಟಿದ್ದರು. ಎರಡು ಬಾರಿ ಎಂಎಲ್‌ಸಿ ಮಾಡಿದ್ದಾರೆ. ಆದರು ಕೂಡ ಈ ಬಾರಿ ನ್ನೆ ಸ್ವಲ್ಪ ಮುನಿಸಿಕೊಂಡು ಬೈಎಲೆಕ್ಷನ್‌ಗೆ ಬರಲಿಲ್ಲ ಎಂದು ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು. 

ಸಿಎಂ ಇಬ್ರಾಹಿಂ ಕಾಂಗ್ರೆಸ್​ ತೊರೆಯುವ ಬಗ್ಗೆ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲಿ ಮುನಿಸು ಇದ್ದೆ ಇರುತ್ತೆ. ಅವರು ನಮ್ಮ ಸ್ನೇಹಿತರು, ಮಾತನಾಡಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಮೆಂಬರ್, ಅವರನ್ನು ಪಕ್ಷ ಎಂಎಲ್‌ಸಿ ಮಾಡಿದೆ. ಸ್ವಲ್ಪ ನೋವಲ್ಲಿ ಇರ್ತಾರೆ ಈಗ ಸೀರಿಯಸ್ ಆಗಿ ಮಾತಾಡೋದು ತಪ್ಪು. ಅವರ ಜೊತೆ ಮಾತನಾಡಿ ಎಲ್ಲ ಸರಿ ಮಾಡಲಾಗುತ್ತದೆ ಎಂದು ಹೇಳಿದ್ದರು.

ರಾಜ್ಯ ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಕಾಂಗ್ರೆಸ್​ ಅಲ್ಪಸಂಖ್ಯಾತ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್​ ತೊರೆಯಲು ನಿರ್ಧರಿಸಿದ್ದಾರೆ. ಇಬ್ರಾಹಿಂ ಪರಿಷತ್ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಆ ಸ್ಥಾನವನ್ನು ಬಿಕೆ ಹರಿಪ್ರಸಾದ್ ಅವರಿಗೆ ನೀಡಿದ ಹಿನ್ನೆಲೆ, ಸಿ.ಎಂ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share News

About admin

Check Also

ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಯುವಕನ ಶವ ಪತ್ತೆ

ಕಲಬುರಗಿ: ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದ ಗುಡ್ಡದಲ್ಲಿ ಯುವಕ ಮತ್ತು ಮಹಿಳೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು …

Leave a Reply

Your email address will not be published. Required fields are marked *