Breaking News

ಅಂಬೇಡ್ಕರ್ ಪೋಟೋ ತೆರವುಗೊಳಿಸಿಯೆಂದು ಸೂಚನೆ ನೀಡಿದ್ದ ನ್ಯಾಯಾಧೀಶ ವಿರುದ್ಧ ಪ್ರತಿಭಟನೆ

ಹುಣಸೂರು: ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸುವ ಜೊತೆಗೆ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು. ಗ್ರೇಡ್- 2 ತಹಸೀಲ್ದಾರ್ ನರಸಿಂಹಯ್ಯರಿಗೆ ಮನವಿ ಸಲ್ಲಿಸುವ ಮೂಲಕ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದ ಸಂವಿಧಾನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

ಈ ವೇಳೆ ಮಾತನಾಡಿದ ದ.ಸಂ.ಸ ಯ ರತ್ನಪುರಿ ಪುಟ್ಟಸ್ವಾಮಿ, ರಾಮಕೃಷ್ಣ, ಡೇವಿಡ್, ವಕೀಲ ಪುಟ್ಟರಾಜು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರೇ ಅಂಬೇಡ್ಕರ್ ಪೋಟೋ ತೆರವುಗೊಳಿಸಿದರೆ ಮಾತ್ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದು, ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರು ಸಂವಿದಾನಕ್ಕೆ ಅಪಮಾನ ಮಾಡಿದಂತಾಗಿದೆ. ತಕ್ಷಣವೇ ಅವರನ್ನು ಸೇವೆಯಿಂದ ವಜಾಗೊಳಿಸುವ ಜೊತೆಗೆ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಶಿವರಾಜ್. ಕಿಟ್ಟಪ್ಪ. ಶಿವಾನಂದ್. ಸೇರಿದಂತೆ ಅನೇಕರಿದ್ದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *