ಅಥಣಿ: ‘ಗೋಕಾಕ ಕ್ಷೇತ್ರದಲ್ಲಿ ಸರಿಯಾದ ರಸ್ತೆಗಳಿಲ್ಲ; ಅಭಿವೃದ್ಧಿಯಾಗಿಲ್ಲ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಕ್ಕೆ ಅಲ್ಲಿನ ಬಿಜೆಪಿ ಶಾಸಕ ರಮೇಶ ಜಾರಕಿಕೊಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಮಾಧ್ಯಮದವರೆಲ್ಲರೂ ಕೂಡಿ ಹೋಗೋಣ. ಸತೀಶ ಹೇಳಿದ ಸ್ಥಿತಿ ಕ್ಷೇತ್ರದಲ್ಲಿದ್ದರೆ ಸ್ಥಳದಲ್ಲೇ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಇದು ಅವರಿಗೂ ಹಾಗೂ ನಿಮಗೂ (ಮಾಧ್ಯಮದವರಿಗೂ) ಸವಾಲು’ ಎಂದು ಹೇಳಿದರು.
‘ಕಬ್ಬಿನ ಗಾಡಿಗಳು ಹೋಗುವ ಕಡೆಗಳಲ್ಲಿ ಎಲ್ಲೋ ಅರ್ಧ ಕಿ.ಮೀ. ಹಾಳಾಗಿರಬಹುದಷ್ಟೆ”ಅಭಿವೃದ್ಧಿ ವಿಚಾರದಲ್ಲಿ ನೀವೇ ವಿಶ್ಲೇಷಣೆ ನಡೆಸಿ. ಸುಮ್ಮನೆ ಅವರು ಸುಳ್ಳು ಅಪವಾದ ಮಾಡುತ್ತಾರೆ’ ಎಂದು ಟೀಕಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

