ಹುಬ್ಬಳ್ಳಿ: ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಪೋಸ್ಟ್ ಗೆ ದೊಡ್ಡಮಟ್ಟದ ಹರಾಜು ನಡೆಯುತ್ತಿದೆ. ಅನುಮಾನವೇ ಇಲ್ಲಾ. ಅತ್ಯಂತ ಭ್ರಷ್ಟ ಸರ್ಕಾರ ಇದು. ಇನ್ನು ಮೂರು ತಿಂಗಳು ಮುಗಿದಿಲ್ಲ. ರಾಜ್ಯ ಸರ್ಕಾರ ಮನೆ ಬಿದ್ದಲ್ಲಿಯೂ ಪರಿಹಾರ ಕೊಡ್ತಿಲ್ಲ. ಮಳೆ ಬಂದು ರಸ್ತೆ ಕೆಟ್ಟಿವೆ ಯಾವುದೇ ರೀತಿ ಅಭಿವೃದ್ಧಿ ಆಗ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ಗ್ಯಾರಂಟಿ ಅನೌನ್ಸ್ ಮಾಡಿದ್ದರು. ಆ ಗ್ಯಾರಂಟಿಗೆ ನೂರೆಂಟು ಕಂಡೀಷನ್ ಹಾಕಿ ಇವತ್ತು ಅದನ್ನು ಸರಿ ಕೊಡ್ತಿಲ್ಲ. ಸಂಪೂರ್ಣ ಅಭಿವೃದ್ಧಿ ಬಂದ್ ಆಗಿದೆ. ಭ್ರಷ್ಟಾಚಾರ ಒಂದು ರೀತಿಯಲ್ಲಿ ಮುಗಿಲು ಮುಟ್ಟಿದೆ. ಬಸ್ ಫ್ರೀ ಅಂತಾರೆ ಬಸ್ ಗಳು ಸಂಚರಿಸಲು ರಸ್ತೆ ಬೇಕಲ್ಲ. ಗೊಂದಲ, ಜನ ವಿರೋಧಿ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಡಿಯೋ ಚಿತ್ರೀಕರಣ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ಹಿಂದೂ ವಿರೋಧಿ ಕ್ರಿಮಿನಲ್ಸ್ ಗಳಿಗೆ ಧೈರ್ಯ ಬರುತ್ತದೆ. ನಮ್ಮ ಹೆಣ್ಣು ಮಕ್ಕಳ, ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲ ಮಾಡುವಂತದ್ದು, ನಮ್ಮ ನಾಯಕರನ್ನು ಕೆಟ್ಟದಾಗಿ ಚಿತ್ರೀಕರಿಸುವಂತದ್ದು ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರ ಕಾರಣ. ನಾವು ಏನೇ ಮಾಡಿದ್ರು ಕಾಂಗ್ರೆಸ್ ಸರ್ಕಾರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುವಂತ ಭರವಸೆ ಅವರಿಗಿದೆ ಎಂದು ಕಿಡಿ ಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





