ಹುಬ್ಬಳ್ಳಿ: ಪಕ್ಷದಿಂದ ಹೊರಬಂದಿದ್ದು, ವಾಪಸ್ ಹೋಗೋ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ.ನನ್ನ ಶಾಪ ಭಾರಿ ಕೆಟ್ಟದ್ದು,ಇವಾಗ ತಟ್ತಿದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ ಎಂದು ನಾಳೆನೇ ರಾಜಿನಾಮೆ ಕೊಡ್ತಿನಿ ಎಂದು ಹುಬ್ಬಳ್ಳಿಯಲ್ಲಿ ಕಣ್ಣೀರುಹಾಕಿ ಸಿಎಂ ಇಬ್ರಾಹಿಂ ಭಾವುಕರಾದರು.
ನಗರದಲ್ಲಿಯಿಂದು ಮಾತನಾಡಿದ ಅವರು,ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ.ಡಿಕೆಶಿ ಬಹಳ ದೊಡ್ಡವರು
ನಮ್ಮಂತವನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡ್ತಿನಿ ಅಂದ್ರೂ. ಆದ್ರೆ ಏನು ಆಗಿಲ್ಲ.ಡಿಕೆಶಿ,ಸಿದ್ದು ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಇವತ್ತು ಎಸ್ ಆರ್ ಪಾಟೀಲ್ ಬೇಟಿಯಾಗ್ತಾರೆ. ಏನ್ ಆಗುತ್ತೆ ನೋಡೋಣ.ನಮ್ಮ ಜೊತೆ ಯಾರ ಬರ್ತಾರೋ ಅವರನ್ನ ಕರೆದುಕೊಂಡು ಹೋಗ್ತೆನೆ.ಇಲ್ಲಿ ಅಲಿಂಗ ಮಾಡ್ತೆನೆ(ಅಲ್ಪ ಸಂಖ್ಯಾತ-ಲಿಂಗಾಯತರು) ಅಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡ್ತೆನೆ. ಅವರು ಅಹಿಂದ ಮಾಡಿದ್ದಾರಲ್ಲ. ಸಿದ್ದುಗೆ ಇಬ್ರಾಹಿಂ ಟಕ್ಕರ್ ಕೊಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

