Breaking News

ಸೋಗಿನಲ್ಲಿ ಯುವಕನಿಗೆ 5.31 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಮಂಗಳೂರು: ಟ್ರೇಡಿಂಗ್ ,ಗೇಮಿಂಗ್ ಮೂಲಕ ಹಣವನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಯುವಕನೋರ್ವನಿಂದ 5.31 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ವರದಿಯಾಗಿದೆ. 22 ವರ್ಷದ ಯುವಕ ಟೆಲಿಗ್ರಾಂ ಖಾತೆ ವೀಕ್ಷಿಸುತ್ತಿದ್ದ ಸಂದರ್ಭ ಫೇರ್ ಪ್ಲೆ ವೆಬ್ ಸೈಟ್‌ಗೆ ಸೇರ್ಪಡೆಗೊಂಡು ಟ್ರೇಡಿಂಗ್ ಮತ್ತು ಗೇಮಿಂಗ್ ಮೂಲಕ ಹಣ ದ್ವಿಗುಣಗೊಳಿಸಬಹುದು ಎಂಬ ಮೆಸೇಜ್‌ನ್ನು ವಂಚಕರು ಕಳುಹಿಸಿದ್ದರು. ಅನಂತರ ಯುವಕನನ್ನು ನಂಬಿಸಿ ಜ.29ರಿಂದ ಜೂ.1ರವರೆಗೆ ಹಂತಹಂತವಾಗಿ ಗೂಗಲ್, ಪೇಟಿಯಂ ಮೂಲಕ 5.31 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *