Breaking News

ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಕೊಲೆ, ಪತ್ನಿ, ಮಗನಿಗೆ ಅರಿವಿಲ್ಲ

ಹರಿಹರ: ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಗ್ರಾಮದ ಶಿವಪ್ಪ (44) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಪ್ಪ ಹೆಂಡತಿ ಮತ್ತು ಮಗನೊಂದಿಗೆ ಚಿಕ್ಕಬಿದರೆ ಕ್ಯಾಂಪ್‌ನಲ್ಲಿ ವಾಸವಿದ್ದರು. ನರೇಗಾ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಸಾವಿತ್ರಮ್ಮ ಬೆಳಿಗ್ಗೆ 11.30ಕ್ಕೆ ವಾಪಸ್‌ ಬಂದಾಗ ಗಂಡ ಮನೆಯಲ್ಲಿರಲಿಲ್ಲ.ರಾತ್ರಿ 10ರವರೆಗೂ ಕಾದು, ಆತ ಬಾರದಿದ್ದಾಗ ಪತ್ನಿ ಹಾಗೂ ಮಗ ಊಟ ಮಾಡಿ ಮಲಗಿದ್ದರು. ಜೂನ್ 23ರ ಮುಂಜಾನೆ 4.30ರ ಸುಮಾರಿಗೆ ಎಂದಿನಂತೆ ಶಿವಮ್ಮ ಎದ್ದು, ಮನೆಯ ಹಿಂದಿನ ಬಾಗಿಲು ತೆರೆದು ನೋಡಿದಾಗ ಕಾಂಪೌಂಡ್‌ನ ಸಿಮೆಂಟ್ ಚಡಿಯ ಮೇಲೆ ಶಿವಪ್ಪ ಮಕಾಡೆಯಾಗಿ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿ, ಕಿವಿ ಹಾಗೂ ಮೂಗಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರುವುದು ಗೊತ್ತಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರ ಅಥವಾ ಕಲ್ಲಿನಿಂದ ಹೊಡೆದು ಶಿವಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಮೃತನ ಅಣ್ಣ ಬಸಪ್ಪ ಪೊಲೀಸರಿಗೆ ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *