Breaking News

ಯಾವ ಪಕ್ಷಕ್ಕೆ ಸೇರುತ್ತನೆ ಎನ್ನುವುದನ್ನು ಶೀಘ್ರದಲ್ಲೇ ತಿಳಿಸುವೆ : ಸಿಎಂ ಇಬ್ರಾಹಿಂ

ಹುಬ್ಬಳ್ಳಿ : ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ನಡುವಿನ ಚರ್ಚೆ ಆರಂಭ ಮಾಡುತ್ತಿರುವುದು ಎಲ್ಲರಿಗೆ ಕುತೂಹಲ ಮೂಡಿಸಿತ್ತು . ಆದರೆ ಇದೀಗ ರಹಸ್ಯ ಸಭೆ ನಂತರ. ಶೀಘ್ರದಲ್ಲೇ ಯಾವ ಪಕ್ಷಕ್ಕೆ ಹೋಗುತ್ತೇನೆ ಅನ್ನೋದನ್ನ ತಿಳಿಸುವೆ ಎಂದು ಸಿಎಂ ಇಬ್ರಾಹಿಂ ರೋಚಕ ತೀರುವು ನೀಡಿದ್ದಾರೆ.

ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ ಸಧ್ಯ ಯಾರ ಹೆಸರು ಹೇಳಲ್ಲ. ಕಾಂಗ್ರೆಸ್ ನವರು ನನ್ನ ಜೊತೆಗಿದ್ದಾರೆ ಯಾವುದನ್ನು ಹೇಳಲ್ಲಾ ಸಮಯಕ್ಕಾಗಿ ಕಾಯುತ್ತಿದ್ದೇನೆ. ಆಲಿಂಗ ಚಳುವಳಿ ವಿಜಯಪುರದಿಂದ ಆರಂಭ ಮಾಡುತ್ತೇವೆ. ಚಳುವಳಿಗೆ ಎಸ್ ಆರ್ ಪಾಟೀಲ್ ಬರುತ್ತಾರೆ. ಕಾಂಗ್ರೆಸ್ ಬಿಟ್ಟು ಎಸ್ ಆರ್ ಪಾಟೀಲ್ ಬರುತ್ತಾರಾ ಅಂತ ಕಾದು ನೋಡಬೇಕಿದೆ ಎಂದರು.

ನನಗೆ ತುಂಬಾ ನೋವಾಗುತ್ತಿದೆ ಅಂತ ಎಸ್ ಆರ್ ಪಾಟೀಲ್ ಸಹಾನುಭೂತಿ ವ್ಯಕ್ತಪಡಿಸಿದರು.ಇಬ್ರಾಹಿಂ ಅವರು ಪಕ್ಷದಲ್ಲಿ ಇರಬೇಕು ಅಂತ ಮನವಿ ಮಾಡಿದರು. ಇನ್ನೂ ಐದಾರು ದಿನಗಳಲ್ಲಿ ಕೊಪ್ಪಳ, ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬೆಳಗಾವಿ ಪ್ರವಾಸ ಮಾಡುತ್ತೇನೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ನನಗೆ ಸಿದ್ದರಾಮಯ್ಯರಿಂದ ಯಾವುದೇ ಫೋನ್ ಕಾಲ್ ಬಂದಿಲ್ಲ. ಅದನ್ನು ನಾನು ನಿರೀಕ್ಷೆ ಸಹ ಮಾಡಲ್ಲ. ನನಗೆ ಜೆಡಿಎಸ್ , ಮಮತಾ ಬ್ಯಾನರ್ಜಿ, ಅಖೀಲೇಶ್ ಯಾದವರ ಮೇಲೆ ಒಲವುಯಿದೆ ಎಂದರು.

Share News

About admin

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *