ಹುಬ್ಬಳ್ಳಿ : ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ನಡುವಿನ ಚರ್ಚೆ ಆರಂಭ ಮಾಡುತ್ತಿರುವುದು ಎಲ್ಲರಿಗೆ ಕುತೂಹಲ ಮೂಡಿಸಿದೆ. ಆದರೆ ಕಾಂಗ್ರೆಸ್ ಹಿರಿಯ ನಾಯಕರ ಭೇಟಿ ಮುಕ್ತಾಯಗೊಂಡು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಚಾರಗಳನ್ನು ಮಾಧ್ಯಮ ಎದುರು ಹೇಳಲ್ಲ.ಸಮಯ ಸಂದರ್ಭದಲ್ಲಿ ಎಲ್ಲಾ ಹೇಳತ್ತೇನೆ ವೇಟ್ ಆ್ಯಂಡ್ ಸಿ. ನನಗೆ ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಮಾತನಾಡಲು ಯಾರೂ ಹೇಳಿಲ್ಲ. ನಾನು ಸ್ವ ಇಚ್ಛೆಯಿಂದ ಪಕ್ಷದ ಹಿತದೃಷ್ಟಿಯಿಂದ ಮತ್ತು ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೇನೆ. ಇಬ್ರಾಹಿಂ ಅವರು ವಿಪಕ್ಷ ನಾಯಕನಾಗುವ ಆಸೆಯಿಟ್ಟುಕೊಂಡಿದ್ದರು ಎಂದು ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿದರು.
ಅವರು ಪಕ್ಷದಲ್ಲಿ ಇರಬೇಕು ಅಂತ ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗೆ ಸದ್ಯ ಯಾವುದೇ ಅಸಮಾಧಾನ ಇಲ್ಲ. ಚುನಾವಣೆ ಸಮಯದಲ್ಲಿ ಒಬ್ಬ ಕಾರ್ಯಕರ್ತರನೂ ಪಕ್ಷ ಬಿಟ್ಟು ಹೋಗಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು.
ನಾನು ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕದ ಬಹಳಷ್ಟು ವಿಚಾರವಾಗಿ ದ್ವನಿ ಎತ್ತಿದ್ದೆ. ಆದರೆ ನಮ್ಮ ಪಕ್ಷದಲ್ಲಿ ಅದನ್ನು ಮನಗಣೆಗೆ ತೆಗೆದುಕೊಂಡಿಲ್ಲ.
ಇದು ನನಗೆ ಮಾಡಿದ ಅನ್ಯಾಯಕ್ಕಿಂತ ನಮ್ಮ ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

