ಮಂಗಳೂರು: ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಫೆಬ್ರವರಿ 3 ರಂದು ಸಂಜೆ 4 ಗಂಟೆಗೆ ಚಿಲಿಂಬಿ ಬಳಿಯ ಕೋಟೆಕಣಿ ರಸ್ತೆ ಮತ್ತು ಕುಳೂರು ಫೆರ್ರಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಾರಿನ ಚಾಲಕ ಕೋಟೆಕಣಿಯಿಂದ ಇಳಿಜಾರಿನ ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಲೇಡಿಹಿಲ್‌ನಿಂದ ಉರ್ವಾ ಸ್ಟೋರ್ಸ್ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆ ಬದಿಗೆ ಬಿದ್ದಿದ್ದಾರೆ.
ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರವೂ ನಿಲ್ಲಿಸಲು ವಿಫಲವಾಗಿದ್ದು, ಪಕ್ಕದ ಅಪಾರ್ಟ್‌ಮೆಂಟ್ ನ ಕಾಂಪೌಂಡ್ ಢಿಕ್ಕಿ ಹೊಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

