Breaking News

ಬನ್ನೂರು ಪುಟಾಣಿ ವೈಭವ್‌ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಆಯ್ಕೆ


ಬನ್ನೂರು: ವಿವಿಧ ಪ್ರಾಣಿ, ಪಕ್ಷಿ, ಹಣ್ಣು, ವಸ್ತುಗಳು, ವಾಹನಗಳು ಹಾಗೂ ದೇಹದ ವಿವಿಧ ಭಾಗಗಳನ್ನು ಗುರುತಿಸುವ ಮೂಲಕ ಪಟ್ಟಣದ ನಿವಾಸಿ ಗಿರೀಶ್‌ ಹಾಗೂ ಗಗನ ದಂಪತಿ ಪುತ್ರ ವೈಭವ್‌ (2) ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಆಯ್ಕೆಯಾಗಿದ್ದಾನೆ.

ಈ ಪೋರ ವರ್ಣಮಾಲೆ ಹಾಗೂ ವಿವಿಧ ಯೋಗದ ಭಂಗಿಗಳನ್ನೂ ಗುರುತಿಸುತ್ತಾನೆ. ಬಾಲಕನ ಸ್ಮರಣಶಕ್ತಿ ಹೆಚ್ಚಾಗಿದೆ.

ಈತನ ಪ್ರತಿಭೆಯನ್ನು ಕಂಡ ಪೋಷಕರು ವಿಡಿಯೊ ಮಾಡಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು. ಈಗ ರೆಕಾರ್ಡ್ಸ್‌ನಲ್ಲಿ ಸ್ಥಾನ ದಕ್ಕಿದ್ದು, ಪ್ರಮಾಣಪತ್ರವನ್ನು ನೀಡಲಾಗಿದೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *