Breaking News

ಯುವತಿಯನ್ನು ಅಕ್ರಮ ಮಾರಾಟ ಮಾಡಲು ಯತ್ನ : ಯುವಕ ಬಂಧನ

ದೇವನಹಳ್ಳಿ: ಮನೆ ಬಿಟ್ಟು ಬಂದಿದ್ದ ಯುವತಿಯನ್ನ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಿದ್ದು ಯುವತಿಯನ್ನು ಏರ್ಪೋಟ್ ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆರೋಪಿ ನಾಗೇಶನ್ನು ವಿಚಾರಣೆಗೆ ಒಳಪಡಿಸಿ ವಿಚಾರಿಸಿದಾಗ ಆಕೆಯನ್ನು ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದಿದ್ದಾಗಿ ಬಾಯಿ ಬಿಟ್ಟಿದ್ದಾನೆ.

10 ಸಾವಿರ ರೂಪಾಯಿಗೆ ಮಾರಾಟ ಮಾಡಲು ಯುವತಿಯನ್ನು ದೆಹಲಿಗೆ ಕರೆದೋಗುತ್ತಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಆರೋಪಿ ನಾಗೇಶ್ ಈ ಹಿಂದೆಯು ಇದೇ ರೀತಿ ಕೆಲ ಯುವತಿಯರನ್ನ ನಂಬಿಸಿ ಮಾರಾಟ ಮಾಡಿದ್ದ. ಸದ್ಯ ಏರ್ಪೋಟ್ ಪೊಲೀಸರಿಂದ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *