ಕಲಬುರಗಿ: ಧರಂಸಿಂಗ್ ಅವರ 86 ನೆಯ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿ 108 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೊಂದು ಬಡವರ ಪರವಾದ ಕಾರ್ಯವಾಗಿದ್ದು, ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಅವರು “2004 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಾನಾಗ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಅಂದು ನಡೆದ ಮಾತುಕತೆಯಂತೆ ಧರಂಸಿಂಗ್ ಸಿಎಂ ಆದರು ನಾನು ಉಪಮುಖ್ಯಮಂತ್ರಿಯಾಗಿ ಒಂದು ವರ್ಷ ಎರಡು ತಿಂಗಳು ಅಧಿಕಾರ ನಡೆಸಿದೆ. ಆ ನಂತರ ದೇವೇಗೌಡರ ಮಾತುಕೇಳಿ ಧರಂಸಿಂಗ್ ನನ್ನನ್ನು ಡಿಸ್ ಮಿಸ್ ಮಾಡಿದರು. ಅದು ಅವರ ಸ್ವಂತ ನಿರ್ಧಾರವಾಗಿರಲಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಜ್ಜನ ವಿನಯವಂತ ಹಾಗೂ ಕರುಣಾಮಯಿ ವ್ಯಕ್ತಿಯಾಗಿದ್ದ ಧರಂಸಿಂಗ್ ತನ್ನನ್ನು ಆತ್ಮೀಯವಾಗಿ ನೋಡುತ್ತಿದ್ದರು. ಜನಪರ ಕಾಳಜಿ ಹಾಗೂ ಅಭಿವೃದ್ದಿ ಮಾಡುವ ಆಲೋಚನೆಯಲ್ಲಿ ಇದ್ದವರು. ಎಂಟು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದರಾಗಿ ಮತ್ತೆ ಸಿಎಂ ಆಗಿ ಜನರ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದ್ದರು. ಈ ಭಾಗದಲ್ಲಿ ಏನಾದರೂ ಅಭಿವೃದ್ದಿ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್ ಕಾರಣರಾಗಿದ್ದಾರೆ ಹಾಗಾಗಿ ಅವರನ್ನ ರಾಮ-ಲಕ್ಷ್ಮಣ ಎಂದೇ ಕರೆಯುತ್ತಿದ್ದರು ಎಂದರು.
ಚುನಾವಣೆಯಲ್ಲಿ ಸೋತಾಗಲೂ ಕೂಡಾ ಜನಪರ ಕೆಲಸ ಮಾಡುತ್ತಿದ್ದರು. ಕಲಬುರಗಿಗೆ ರಿಂಗ್ ರಸ್ತೆ ಅವರ ಕೊಡುಗೆ. ಸಂವಿಧಾನದ ತಿದ್ದುಪಡಿ ಮಾಡಿ 371 ಜಾರಿಗೆ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್ ಅವರ ಶ್ರಮದಿಂದ ಆಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

