Breaking News

ವಿವಾಹಿತೆ, ಯುವಕನ ಹುಚ್ಚು ಪ್ರೀತಿ ಸಾವಿನಲ್ಲಿ ಅಂತ್ಯ

ಚಿಕ್ಕಮಗಳೂರು: ವಿವಾಹಿತೆ ಮತ್ತು ಯುವಕನ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ 36 ವರ್ಷದ ಲತಾ ಮತ್ತು ಹೊಸದುರ್ಗ ತಾಲೂಕು ಬೆಲಗೂರಿನ ಲಕ್ಷ್ಮಿಕಾಂತ್(31) ಮೃತಪಟ್ಟವರು ಘಟನೆ ನಡೆದಿದೆ.

15 ದಿನಗಳ ಹಿಂದೆ ಲಕ್ಷ್ಮಿಕಾಂತ್ ಊರಿಗೆ ಬಂದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಲತಾ ತವರು ಮನೆಗೆ ಹೋಗಿದ್ದಾರೆ.ಫೆ. 7ರಂದು ಲಕ್ಷ್ಮಿಕಾಂತ್ ಮತ್ತು ಲತಾ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಬುಧವಾರ ಕಡೂರು ತಾಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇಗುಲದ ಸಮೀಪದ ವೇದಾವತಿ ನದಿಯ ಚೆಕ್ ಡ್ಯಾಂ ಬಳಿ ಬ್ಯಾಗ್ ಗಳು ಕಂಡುಬಂದಿವೆ.

ನೀರಿನಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಗಟಿ ಠಾಣೆ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದು ದೂರವಾಣಿ ಸಂಖ್ಯೆ ಪರಿಶೀಲಿಸಿ ಪತಿಗೆ ಮಾಹಿತಿ ನೀಡಿದ್ದಾರೆ. ಮರುದಿನ ಮುಳುಗು ತಜ್ಞ ಮಲ್ಪೆಯ ಈಶ್ವರ್ ಕರ್ಕೆರಾ ಅವರನ್ನು ಕರೆಸಿ ಲಕ್ಷ್ಮಿಕಾಂತ್ ಮೃತದೇಹ ಹೊರ ತೆಗೆದಿದ್ದು, ಸಂಬಂಧಿಕರಿಗೆ ಇಬ್ಬರ ಮೃತದೇಹ ಹಸ್ತಾಂತರ ಮಾಡಲಾಗಿದೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *