ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಸಂಘರ್ಷದಿಂದಾಗಿ ಮೂರು ದಿನಗಳ ಕಾಲ ಪ್ರೌಢ ಶಾಲೆಗಳು ಸೇರಿದಂತೆ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಇದೀಗ ರಜೆಯ ಬಳಿಕ ಇಂದಿನಿಂದ 9, 10ನೇ ತರಗತಿಯ ಪ್ರೌಢ ಶಾಲೆಗಳನ್ನು ಆರಂಭಿಸಲಾಗುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 9 ಮತ್ತು 10ನೇ ತರಗತಿಗಳಿಗೆ ನೀಡಲಾಗಿದ್ದ ಮೂರು ದಿನಗಳ ರಜೆ ಮುಕ್ತಾಯಗೊಳಿಸಲಾಗಿದ್ದು, ಸೋಮವಾರದ ಇಂದಿನಿಂದ ಎಂದಿನಂತೆ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿಯವರು ಈಗಾಗಲೇ ಜಿಲ್ಲಾಧಿಕಾರಿಗಳು, ಎಸ್ಪಿಗಳ ಜೊತೆಗೆ ಮಾತುಕತೆ ನಡೆಸಿದ್ದು, ಶಾಲೆಗಳಲ್ಲಿ ಸೌಹಾರ್ಧಯುತ ವಾತಾವರಣದೊಂದಿಗೆ ಶಾಲೆಗಳನ್ನು ಆರಂಭಿಸೋದಕ್ಕೆ ಸೂಚಿಸಿದ್ದಾರೆ. ಜೊತೆಗೆ ಈ ಸಂಬಂಧ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ಶಾಂತಿಯುತವಾಗಿ ಹೈಸ್ಕೂಲ್ ಆಂರಭಕ್ಕೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

