Breaking News

ಹವಾಮಾನ ವೈಪರೀತ್ಯ; ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 26 ನಿಮಿಷ ಆಗಸದಲ್ಲೇ ಸುತ್ತಿದ ಸಿಎಂ ಫ್ಲೈಟ್

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಗೆ ಇಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾನಕ್ಕೆ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಹವಾಮಾನ ವೈಪರೀತ್ಯ ಬಿಸಿ ತಟ್ಟಿತ್ತು.

ಬೆಂಗಳೂರಿನಿಂದ ಇಂಡಿಗೋ 6E 7227 ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ನಿಗದಿತ ಸಮಯವಾದ 7.30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್‌ ಸಿಕ್ಕಿರಲಿಲ್ಲ. ಹಾಗಾಗಿ ವಿಮಾನವು 26 ನಿಮಿಷಗಳ ಕಾಲ ಆಕಾಶದಲ್ಲಿಯೇ ಹಾರಡಿ ನಂತರ ಲ್ಯಾಂಡ್ ಆಗಿದೆ.‌

ಈ ವಿಮಾನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಒಟ್ಟಿಗೆ ಪ್ರಾಯಾಣ ಮಾಡುತ್ತಿದ್ದರು. ಆದರೆ ನಿಗದಿತ ಸಮಯಕ್ಕಿಂತ ಮುಖ್ಯಮಂತ್ರಿಗಳ ವಿಮಾನವು 26 ನಿಮಿಷ ತಡವಾಗಿ ಹುಬ್ಬಳ್ಳಿ ವಿಮಾನದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *