Breaking News

ಎಸ್ಪಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ ಕುಮಾರ ಸ್ವಾಮಿ

ರಾಮನಗರ: “ಹಳ್ಳಿಗಳಲ್ಲಿ ಹೆಚ್ಚಾಗಿರುವ ಮದ್ಯ ಮಾರಾಟವನ್ನು ತಡೆಗಟ್ಟಿ ಅವಾಗ ನಿಮ್ಮನ್ನು ಮೆಚ್ಚುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬುಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಕುಮಾರಸ್ವಾಮಿಯನ್ನು ಭೇಟಿಮಾಡಿದ ಕಾರ್ಯಕರ್ತರ ಅಳಲಿನಿಂದ ಸಿಟ್ಟಾದ ಕುಮಾರಸ್ವಾಮಿ ಎಸ್ಪಿ ಸಂತೋಷ್ ಬಾಬುಗೆ ಕರೆ ಮಾಡಿದರು, ಪೋನಿನಲ್ಲೇ ತರಾಟೆ ತೆಗದುಕೊಂಡರು. “ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದರೆ ಬಿಡಲ್ಲ ನಾನು, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮಂತಹವರಿಂದ. ಆ ಕುಟುಂಬವನ್ನು ಉಳಿಸಿದ್ದು ನಾನು” ಎಂದು ಅಸಮಾಧಾನ ಹೊರಹಾಕಿದರು.

ಪೋಲಿಸರು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ವರ್ತಿಸುತ್ತಿಲ್ಲ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವವರಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಿದ್ದಾರೆ. ರೈತರ ಬಳಿ ಮದ್ಯ ಸಿಕ್ಕರೆ ಅವರನ್ನು ಜೈಲಿಗೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Share News

About admin

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *