Breaking News

ಕಳ್ಳರ ಕೈಚಳಕ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ.

: ಕಳ್ಳರ ಗುಂಪೊಂದು ಕಾರಿನಲ್ಲಿದ್ದ ಚಿನ್ನಾಭರಣವನ್ನು ಕಾರಿನ ಗಾಜು ಒಡೆದು ಕ್ಷಣಮಾತ್ರದಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ವಾಪಸ್ ಕಾರಿನಲ್ಲಿ ತೆರಳುತ್ತಿದ್ದ ಶ್ರೀನಿವಾಸ್ ದಂಪತಿಗಳು ಮಾರ್ಗಮದ್ಯೆ ಊಟಕ್ಕೆಂದು ಕಾರನ್ನು ನಿಲ್ಲಿಸಿ ಹೋಟೆಲ್’ಗೆ ಹೋಗಿದ್ದು ಈ ವೇಳೆ 5 ಜನ ಖತರ್ನಾಕ್ ಕಳ್ಳರು ಕಾರಿನ ಗಾಜು ಹೊಡೆದು ಕಾರಿನಲ್ಲಿಟ್ಟಿದ್ದ ಚಿನ್ನಾಭರಣದ ಬ್ಯಾಗ್ ಕಳವು ಮಾಡಿದ್ದು ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಮೊದಲಿಗೆ ಇಬ್ಬರು ಕಳ್ಳರು ಹೋಟೆಲ್ ಬಳಿ ತೆರಳಿ ಕಾರಿನ ಮಾಲೀಕನನ್ನ ಗಮನಿಸುತ್ತಿದ್ದು ನಂತರ ಮತ್ತೋರ್ವ ಕಳ್ಳ ಕಾರಿನ ಗಾಜನ್ನು ಕ್ಯಾಟರ್ ಬಿಲ್ ಬಳಸಿ ಕಲ್ಲನ್ನು ಗಾಜಿಗೆ ಹೊಡೆದು ಪುಡಿ ಮಾಡಿದ್ದು ಮತ್ತಿಬ್ಬರು ಕಳ್ಳರು ಕಾರಿನಲ್ಲಿದ್ದ ಬ್ಯಾಗ್ ಹೊತ್ತೊಯ್ದಿದ್ದಾರೆ,ಈ ಸಂಬಂಧ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About Ambrish BIG TV NEWS,Anekal

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *