ಚಂಡೀಗಡ/ಲಖನೌ: ಪಂಜಾಬ್ ವಿಧಾನಸಭೆಯ ಎಲ್ಲ 117 ಕ್ಷೇತ್ರಗಳು ಹಾಗೂ ಉತ್ತರ ಪ್ರದೇಶದ 59 ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಶೇ 68ರಷ್ಟು ಮತ ಚಲಾವಣೆಯಾಗಿದೆ.
2017ರಲ್ಲಿ ಶೇ 77.36ರಷ್ಟು ಮತದಾನವಾಗಿತ್ತು. ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಶೇ 57ರಷ್ಟು ಮತದಾನವಾಗಿದೆ. ಈ ಕ್ಷೇತ್ರಗಳಲ್ಲಿ 2017ರಲ್ಲಿ ಶೇ 62ರಷ್ಟು ಮತದಾನವಾಗಿತ್ತು.
ಐದು ಪ್ರಮುಖ ಪಕ್ಷಗಳು ಸ್ಪರ್ಧಿಸುವ ಕಾರಣ ಪಂಜಾಬ್‌ನಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿತ್ತು. ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು, ಕ್ಯಾಪ್ಟನ್ ಅಮರಿಂದರ್ ಸಿಂಗ್, ಭಗವಂತ್ ಮಾನ್ ಅವರ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಕೆಲವೆಡೆ ಕಾಂಗ್ರೆಸ್-ಎಎಪಿ ಕಾರ್ಯಕರ್ತರು ಘರ್ಷಣೆ ನಡೆಸಿದ್ದಾರೆ. ಇವಿಎಂ ಕೈಕೊಟ್ಟ ಕೆಲವು ಘಟನೆಗಳು ನಡೆದಿವೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸ್ಪರ್ಧಿಸಿದ್ದ ಕರ್ಹಾಲ್ ಕ್ಷೇತ್ರದ ಜನರು ಮತ ಚಲಾಯಿಸಿದರು. ಝಾನ್ಸಿಯಲ್ಲಿ ಅತಿಹೆಚ್ಚು ಅಂದರೆ, ಶೇ 67ರಷ್ಟು ಮತದಾನವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

