ಇಲ್ಲಿನ ನಿವಾಸಿ ಯಶೋಧರ ಎಂಬುವವರ ಕ್ರೆಡಿಟ್ ಕಾರ್ಡ್ ಸಮಖ್ಯೆ ಹಾಗೂ ಒಟಿಪಿ ಪಡೆದು ಆನ್‌ಲೈನ್‌ನಲ್ಲಿ ವಂಚನೆ ನಡೆಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಹಾರಾಷ್ಟದ ಅವಿನಾಶ್ ರಮೇಶ್ ಗೌಡ (24) ಬಂಧಿತ ಆರೋಪಿ. ಆತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿದ್ದ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಯಶೋಧರ ಅವರಿಗೆ ವಿವಿಧ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿದ್ದ ಆರೋಪಿಯು ತಾನು ವಿಮೆ ಕಂಪನಿಯೊಂದರಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ವಿಮೆ ಮಾಡಿಸಿಕೊಡುವುದಾಗಿ ಹೇಳಿ ಆತ ಹಣ ಪಾವತಿಸುವಂತೆ ತಿಳಿಸಿದ್ದ. ಇದಕ್ಕೆ ಯಶೋಧರ ಅವರು ನಿರಾಕರಿಸಿದ್ದರು. ಬಳಿಕ ಆರೋಪಿಯು ವಿಮೆಯನ್ನು ರದ್ದು ಮಾಡುವುದಾಗಿ ತಿಳಿಸಿ, ಯಶೋಧರ ಅವರ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಒಟಿಪಿ ಪಡೆದುಕೊಂಡಿದ್ದ. ಅವರ ಬ್ಯಾಂಕ್ ಖಾತೆಯಿಂದ ₹ 2.37 ಲಕ್ಷ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡಿತ್ತು. ಈ ಬಗ್ಗೆ ಅವರು ದೂರು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Check Also
ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!
ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …
bigtvnews | Hubli Dharwad News | Kannada News | Karnataka News Hubli News | News In Hubli | Local news

