Breaking News

ಕಾಂಗ್ರೆಸ್‌ಗೆ ಸವಾಲು ಹಾಕಿದ ಸಿಎಂ


ವಿಧಾನ ಪರಿಷತ್ತು: “ನೀವು ಈಗ ನಡೆಸುತ್ತಿರುವ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡೇ ಜನರ ಮುಂದೆ ಬನ್ನಿ. ನಾವು ಅಭಿವೃದ್ಧಿ ಮಂತ್ರದೊಂದಿಗೆ ಬರುತ್ತೇವೆ. ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಸವಾಲು ಹಾಕಿದರು.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆ ವೇಳೆ ಮಾತನಾಡಿದ ಅವರು, “ರಾಜಕೀಯ ಲಾಭಕ್ಕಾಗಿ ನೀವು (ಕಾಂಗ್ರೆಸ್‌) ಅಧಿವೇಶನದಲ್ಲಿ ಈ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಿ. ವಾಸ್ತವವಾಗಿ ಸಚಿವರು ಹೇಳಿದೆ ಇರುವುದನ್ನು, ಸೇರಿಸಿ ಹೋರಾಟ ನಡೆಸುತ್ತಿದ್ದೀರಿ. ಇದು ತಪ್ಪು ಮತ್ತು ಜನ ಕೂಡ ಇದನ್ನು ಒಪ್ಪುವುದಿಲ್ಲ. ಬೇಕಿದ್ದರೆ ಇದೇ ವಿಷಯ ಇಟ್ಟುಕೊಂಡು ಜನರ ಮುಂದೆ ಬನ್ನಿ. ಆಗ ಜನರೇ ತೀರ್ಪು ಹೇಳುತ್ತಾರೆ’ ಎಂದು ಸವಾಲು ಹಾಕಿದರು.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *