ಮಹಿಳೆ ಪೋಟೋಗಳನ್ನು ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಗರದ ಶ್ರೀನಿವಾಸನಗರ ಬಡಾವಣೆಯ ನಿವಾಸಿ ಹಾಗೂ ಆಲ್ದೂರು ಹೋಬಳಿ ಯೂತ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಆದಿತ್ಯ (40) ಬಂಧಿತ ಆರೋಪಿ.ಜಯನಗರ ಬಡಾವಣೆಯ ಮಹಿಳೆ ಜತೆ ಫೋನ್ ನಲ್ಲಿ ಸಂಪರ್ಕ ಹೊಂದಿದ್ದ ಈತ ವಾಟ್ಸಾಪ್ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೇ, ಫೋಟೋಗಳನ್ನು ಪಡೆದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸ್ನೇಹಿತರಿಗೆ ಕಳಿಸಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.ಇನ್ನೊಂದೆಡೆ ಈತ ಪರಿಚಿತರ ಪತ್ನಿ ಮತ್ತು ಹೆಣ್ಣುಮಕ್ಕಳಿಗೆ ಮೆಸೇಜ್ ಮಾಡುತ್ತಿದ್ದ ಎಂದು ಸಾಕ್ಷಿ ಸಮೇತ ಆತನ ಮನೆಗೆ ನುಗ್ಗಿದ ಯುವಕರ ಗುಂಪು ಹೆಂಡತಿ ಎದುರೇ ಹಿಗ್ಗಾಮುಗ್ಗಾ ಥಳಿಸಿದೆ. ಈ ವೇಳೆ ಪತಿಗೆ ಹೊಡೆಯದಂತೆ ಪತ್ನಿ ಯುವಕರ ಗುಂಪನ್ನು ತಡೆದು ರಕ್ಷಿಸಿದ್ದಾಳೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

