Breaking News

ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಪ್ರಕಾಶ ಅಂತ್ಯ ಸಂಸ್ಕಾರ

ನಿಪ್ಪಾಣಿ: ತುಮಕೂರು ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ, ವಾಯುಸೇನೆಯಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕಿನ ಬೆನಾಡಿ ಗ್ರಾಮದ ಪ್ರಕಾಶ ರಾಮಚಂದ್ರ ದೇಶಿಂಗೆ (33) ಅವರ ಅಂತ್ಯಸಂಸ್ಕಾರ ವಾಯುಸೇನೆಯಿಂದ ಸಕಲ ಗೌರವಗಳೊಂದಿಗೆ ಮಂಗಳವಾರ ಸ್ವಗ್ರಾಮದಲ್ಲಿ ನಡೆಯಿತು.

ಆಕಾಶದತ್ತ ಗುಂಡು ಹಾರಿಸಿ ವಾಯುಸೇನೆಯ ಸಿಬ್ಬಂದಿ ಪ್ರಕಾಶ ಅವರಿಗೆ ಗೌರವ ಸಲ್ಲಿಸಿದರು. ಅವರ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರು ದುಃಖದ ಕಡಲಲ್ಲಿ ಮುಳುಗಿದ್ದಾರೆ.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *