ಪಾಕಿಸ್ತಾನದ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಂಧಿತನಾದ ತುಮಕೂರಿನ ಅಲ್ಲಾಭಕ್ಷು ವಿಚಾರಣೆ ವೇಳೆ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಪಾಕಿಸ್ತಾನದ ಹ್ಯಾಂಡ್ಲರ್ ರಾಣಾ, “ನಮ್ಮ ಮಾತು ಕೇಳಿದರೆ ನಿನ್ನನ್ನು ಭಾರತದ ದೊಡ್ಡ ಡಾನ್ ಮಾಡುತ್ತೇವೆ” ಎಂದು ಆಮಿಷ ಒಡ್ಡಿದ್ದಾನೆ ಎಂದು ಹೇಳಿದ್ದಾನೆ. ಯುವಕರನ್ನು ಅಂತರ್ಜಾಲದ ಮೂಲಕ ಸಂಪರ್ಕಿಸಿ, ಹಣ, ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ತಾಂತ್ರಿಕ ನೆರವಿನ ಭರವಸೆ ನೀಡಿ ತಮ್ಮ ಜಾಲಕ್ಕೆ ಸೆಳೆಯಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಭಾರತದಲ್ಲಿ ಹೊಸ ಭೂಗತ ಜಾಲ ನಿರ್ಮಿಸುವ ಸಂಚು ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಪೊಲೀಸರು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ, ಆರ್ಥಿಕ ನೆರವು ಬಂದಿದೆಯೇ ಹಾಗೂ ಮುಂದಿನ ಗುರಿ ಏನಾಗಿತ್ತು ಎಂಬ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

