ಕಳೆದ ವಾರ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ರಿಲೀಸ್ ಆಗಿದ್ದವು. ಒಂದು ಜಗ್ಗೇಶ್, ಧನಂಜಯ್ ಸಿನಿಮಾ ‘ತೋತಾಪುರಿ 2’. ಎರಡನೆಯದ್ದು ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರಂಗಾಯಣ ರಘು ನಟನೆಯ ‘ಬಾನದಾರಿಯಲಿ’. ಅದರಲ್ಲೂ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ‘ಬಾನದಾರಿಯಲಿ’ ಪ್ರೇಕ್ಷಕರ ನೆಚ್ಚಿನ ಸಿನಿಮಾ ಆಗಿತ್ತು.
ಬಹಳ ದಿನಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಅವರ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದರು. ಜೊತೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ರುಕ್ಷಿಣಿ ವಸಂತ್ ಈ ಸಿನಿಮಾ ಮತ್ತೊಂದು ಅಟ್ರ್ಯಾಕ್ಷನ್ ಆಗಿತ್ತು.
ಈ ಎಲ್ಲಾ ಕಾರಣಕ್ಕೆ ಗಣೇಶ್ ಸಿನಿಮಾ ‘ಬಾನದಾರಿಯಲಿ’ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಬಹುದು ಅನ್ನೋ ನಿರೀಕ್ಷೆಯಿತ್ತು. ಅಲ್ಲದೆ ರಿಲೀಸ್ ಆಗುತ್ತಿರುವ ಸಮಯ ಕೂಡ ಸರಿಯಾಗಿಯೇ ಇತ್ತು. ಬ್ಯಾಕ್ ಟು ಬ್ಯಾಕ್ ರಜೆಗಳಿದ್ದವು. ಇದರಿಂದ ಬಾಕ್ಸಾಫೀಸ್ ಕಲೆಕ್ಷನ್ ಮೇಲೂ ದೊಡ್ಡ ನಿರೀಕ್ಷೆಯಿತ್ತು. ಹಾಗಿದ್ದರೆ, ಕಾವೇರಿ ವಿವಾದ, ಕರ್ನಾಟಕ ಬಂದ ಎಫೆಕ್ಟ್ ನಡುವೆಯೂ ಸಿನಿಮಾ ಎಷ್ಟು ಗಳಿಕೆ ಮಾಡಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news





