Breaking News

ಕ್ಷುಲ್ಲಕ ಕಾರಣಕ್ಕೆ 8 ಜನರಿಂದ ಹಲ್ಲೆ : ಕಿಮ್ಸ್‌ಗೆ ಯುವಕ ದಾಖಲು

ಹುಬ್ಬಳ್ಳಿ: ಯುವಕನೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಎಂಟು ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

ಮಹಮ್ಮದ್ ಅಲಿ ನದಾಫ್ (27) ಹಲ್ಲೆಗೆ ಒಳಗಾದ ಯುವಕನಾಗಿದ್ದು, ಈತನ ಮೇಲೆ ನೆರೆ ಹೊರೆಯ ಜನರ ಗುಂಪೊಂದು ಹಲ್ಲ ಮಾಡಿದೆ. ಬೆಳಗಲಿ ಗ್ರಾಮದಲ್ಲಿಂದು ಷರೀಫ್ ಹಾಗೂ ಗುರುಗೋವಿಂದ ಭಟ್ಟರ ಜಾತ್ರಾ ಮಹೋತ್ಸವವಿತ್ತು. ಈ ಹಿನ್ನೆಲೆಯಲ್ಲಿ ಮಹಮ್ಮದ್ ಅಲಿ ತನ್ನೂರಿನ ಬಸ್ ನಿಲ್ದಾಣದ ಬಳಿ ಬಂದಿದ್ದಾನಂತೆ.

ಈ ವೇಳೆ ಅದೇ ಊರಿನ ಹನುಮಂತ ಬೆಟದೂರ ಎಂಬಾತ ಸೈಕೋ ಮಹಮ್ಮದ್ ಅಲಿ ಎಂದು ಕರೆದಿದ್ದಾನಂತೆ. ಆಗ ಮಹಮ್ಮದ್ ಅಲಿ ಹಾಗೆ ಕರೆಯಬೇಡಾ ಎಂದು ಹೇಳಿದರು ಸಹಿತ ಹನುಮಂತ ಬೆಟದೂರ ಬಾಯಿಗೆ ಬಂದಹಾಗೆ ಬೈದಿದಲ್ಲದೇ ಹೊಡೆಯಲು ಮುಂದಾಗಿದ್ದಾನಂತೆ. ಆಗ ಮಹಮ್ಮದ್ ಹನುಮಂತನನ್ನು ದೂರ ತಳ್ಳಿದ್ದಾನೆ. ಇದರಿಂದ ಮತ್ತಷ್ಟು ಕೋಪಕೊಂಡು ಹನುಮಂತ ಪರಶುರಾಮ ನೆರ್ತಿ, ಷರೀಫ್ ನೆಲಗೇರಿ, ಬಸವರಾಜ ನೆರ್ತಿ, ಗುರುಶಾಂತ ಗೌಡ ಪಾಟೀಲ್ ಸೇರಿದಂತೆ ಇನ್ನಿತರರನ್ನು ಕರೆಸಿ ಮಹಮ್ಮದ ಅಲಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆಂದು ಮಹಮ್ಮದ್ ಅಲಿ ಕುಟುಂಬಸ್ಥರು ತಿಳಿಸಿದ್ದಾರೆ.

ಮಹಮ್ಮದ್ ಅಲಿ ನದಾಫ್ ನಿಗೆ ತಲೆ, ತುಟಿ, ಕೈ,ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಈತನಿಗೆ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *