ದಕ್ಷಿಣ ಕನ್ನಡ : ಕಾಲೇಜು ವಿದ್ಯಾರ್ಥಿನಿ ತನ್ನ ಸಹಪಾಠಿ ವಿದ್ಯಾರ್ಥಿ, ಬಿಜೆಪಿ ಮುಖಂಡನ ಪುತ್ರ ಜೆ.ಕೃಷ್ಣ ರಾವ್ ಜೊತೆ ಪ್ರೀತಿಯಲ್ಲಿ ಸಿಲುಕಿ, ವಿವಾಹಕ್ಕೂ ಮುನ್ನವೇ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಿಯಕರ ಕೈಕೊಟ್ಟ ಪರಿಣಾಮ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹುಡುಗನ ಮನೆಯವರು ಇವರ ಸಂಬಂಧಕ್ಕೆ ಒಪ್ಪಿಗೆ ನೀಡದ ಕಾರಣ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಇದಕ್ಕೂ ಮೊದಲು ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ್ದ ಜೆ. ಕೃಷ್ಣ ರಾವ್, ಯುವತಿ ಗರ್ಭಿಣಿಯಾದ ಬಳಿಕ ಕೈಕೊಟ್ಟಿದ್ದ. ಆ ಬಳಿಕ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಮಗುವಿನ ತಂದೆ ಎಂಬುದು ದೃಢಪಟ್ಟರೂ, ಜಾತಿ ಕಾರಣದಿಂದ ಯುವಕನ ಮನೆಯವರು ಮದುವೆಗೆ ನಿರಾಕರಿಸಿದ್ದರು. ಈ ಪ್ರಕರಣದ ಮಧ್ಯೆ ಆತ ಜೈಲು ಸೇರಿದರೂ, ಕೆಲವೇ ತಿಂಗಳಲ್ಲಿ ಬಿಡುಗಡೆಗೊಂಡಿದ್ದ. ಸಮಾಜದ ಟೀಕೆ ಹಾಗೂ ಸಾಮಾಜಿಕ ಜಾಲತಾಣಗಳ ಟ್ರೊಲ್ ಗಳಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

