ಹುಬ್ಬಳ್ಳಿ: ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಅಪರಿಚಿತನೊಬ್ಬ ಸಂದೇಶ ಕಳಿಸಿ, ಗಫಾರಶೇಖ ಖಾದರವಲಿ ಎಂಬುವರ ಖಾತೆಯ ವಿವರ ಪಡೆದು, ಸುಮಾರು 73 ಸಾವಿರ ರೂ. ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಇವರಿಗೆ ಸಂದೇಶ ಕಳುಹಿಸಿದ್ದಾನೆ. ಬ್ಯಾಂಕ್‌ನ ಸಿಬ್ಬಂದಿ ಇರಬಹುದು ಎಂದು ಖಾದರವಲಿ ಅವರು ಸಂದೇಶದಲ್ಲಿರುವ ಲಿಂಕ್ ಓಪನ್ ಮಾಡಿದ್ದಾರೆ. ನಂತರ ವೆಬ್‌ಸೈಟ್‌ನಲ್ಲಿ ಹೆಸರು, ಪಾಸವರ್ಡ್, ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿದ್ದಾರೆ. ನಂತರ ಓಟಿಪಿ ಬಂದಿದ್ದು, ಅದನ್ನು ಹಾಕಿದ್ದಾರೆ. ಇದಾದ ಬಳಿಕ ಅವನ ಖಾತೆಯಿಂದ ಮೊದಲು 25 ಸಾವಿರ, 48 ಸಾವಿರ ರೂ. ಹಣವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

