ಬೆಂಗಳೂರು : “ನನ್ನ ಬಗ್ಗೆ ಟೀಕೆ ಮಾಡಿರುವ ವ್ಯಕ್ತಿಯ ಹೇಳಿಕೆ, ಆತ ಬಳಸಿರುವ ಪದಪುಂಜಗಳು ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆತನ ಮಾತುಗಳೇ ಆತನ ಸಂಸ್ಕಾರ ಎಂಥದ್ದು ಎಂದು ತೋರಿಸುತ್ತದೆ” ಎಂದು ಯೋಗೇಶ್ವರ್ ವಿರುದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹರಿಹಾಯ್ದರು.
ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು.
“ನನ್ನ ಜೇವನ ತೆರೆದ ಪುಸ್ತಕ. ನನಗೆ ಯಾರ ಸರ್ಟಿಫಿಕೇಟ್ ಕೂಡಾ ಬೇಕಿಲ್ಲ. ತಾಜ್ ವೆಸ್ಟೆಂಡ್‌ನಲ್ಲಿ ರಾಸಲೀಲೆ ಮಾಡಲು ನಾನು ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಲು ಹೋಗುತ್ತಿದ್ದೆ”ಎಂದು ಯೋಗೇಶ್ವರ್ ಅವರ ರಾಸಲೀಲೆ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.
“ನಾನು ಎಲ್ಲೇ ಹೋದರೂ ನನ್ನ ಪಿಎ ಜತೆಯಲ್ಲೇ ಇರುತ್ತಿದ್ದರು. ಈಗಲೂ ಇರುತ್ತಾರೆ. ಆಗ ನನ್ನ ಸಂಪುಟ ಸಹೋದ್ಯೋಗಿ ಆಗಿದ್ದ ಸಾ.ರಾ ಮಹೇಶ್ ಅವರೂ ಇರುತ್ತಿದ್ದರು. ಇನ್ನು ಅನೇಕ ಸ್ನೇಹಿತರು ಇರುತ್ತಿದ್ದರು. ನನ್ನದು ತೆರೆದ ಪುಸ್ತಕ” ಕಿಡಿಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

