Breaking News

ಶಿವಮೊಗ್ಗದಲ್ಲಿ ಹಲ್ಲೆ ಪ್ರಕರಣ : ಇಬ್ಬರು ಬಂಧನ

ಶಿವಮೊಗ್ಗ: ನಗರದಲ್ಲಿ ನಡೆದಂತ ಹರ್ಷ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ವರದಿಯಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕಃ-3-3-2022 ರಂದು ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿಯೊಬ್ಬರು ತಮ್ಮ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಾಸ್ ಮನೆಗೆ ಹಿಂದಿರುಗುವಾಗ ವಿದ್ಯಾನಿಕೇತನ ಶಾಲೆಯ ಹತ್ತಿರ ಅವರಿಗೆ ಹಲ್ಲೆಯಾದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0100/2022 ಕಲಂ 504, 324, 307 ಸಹಿತ 34 ಐಪಿಸಿ ಮತ್ತು ಕಲಂ 3 (2) (v) the sc & st Amendment Act 2015 ರೀತ್ಯಾ ಪ್ರಕರಣ ದಾಖಲಿಸಿ, ಸದರಿ ಪ್ರಕರಣದ ಆರೋಪಿಗಳಾದ 1] ಸಲ್ಮಾನ್, 20 ವರ್ಷ, ಬಡಾವಣೆ ಶಿವಮೊಗ್ಗ ಟೌನ್ ಮತ್ತು 2) ಸೈಯದ್ ಸುಬಾನ್, 18 ವರ್ಷ, ಅಣ್ಣನಗರ, ಶಿವಮೊಗ್ಗ ಟೌನ್ ರವರುಗಳನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *