Breaking News

ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದ ಇಬ್ರಾಹಿಂ

ಕಲಬುರಗಿ: ಶಿವಮೊಗ್ಗದಲ್ಲಿ ಸತ್ತ ಹರ್ಷನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಕೊಟ್ಟಿದೆ. ಆದರೆ, ಉಕ್ರೇನ್​ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನ್ ಕೊಟ್ಟಿಯೋ ಬೊಮ್ಮಾ? ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಂಎಲ್‌ಎ ಹೇಳ್ತಾನೆ, ಮೃತದೇಹ ತರಲು ವಿಮಾನದಲ್ಲಿ ಇಲ್ಲ ಅಂತ. ಏನ್ ಬೇಜವಾಬ್ದಾರಿ ಮಾತನಾಡ್ತಾರೆ ಇವರು? ನರಗುಂದದಲ್ಲಿ ಒಬ್ಬ ಮುಸ್ಲಿಂ ಹುಡುಗನನ್ನು ಭಜರಂಗದಳದವರು ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ದೇಶ ಕಾಯುವ ಯೋಧ ಹುತಾತ್ಮರಾದರೂ ಆತ ಮುಸಲ್ಮಾನ ಅನ್ನೋ ಕಾರಣಕ್ಕೆ ನಯಾಪೈಸೆ ಕೊಡಲ್ಲ ಈ ಸರಕಾರ.

ಇದು ನ್ಯಾಯ ಏನ್ರಿ ಬಸವರಾಜ್ ಬೊಮ್ಮಾಯಿ ? ಇದರ ಶಾಪ ನಿಮ್ಮ ಮಕ್ಕಳಿಗೆ ತಟ್ಟದೇ ಇರುತ್ತಾ ಬೊಮ್ಮಾಯಿ? ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದಆಕ್ರೋಶ ವ್ಯಕ್ತಪಡಿಸಿದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *