Breaking News

ಯಡಿಯೂರಪ್ಪ ಅವರ ದೊಡ್ಡ‌ ಮನಸ್ಸಿನ ನಾಯಕ ಹುಡುಕಿದರೂ‌ ಸಿಗುವುದಿಲ್ಲ : ಬೊಮ್ಮಾಯಿ


ಶಿಕಾರಿಪುರ : ನಾನು ರಾಜಕಾರಣದಲ್ಲಿ ಇಷ್ಟರಮಟ್ಟಿಗೆ ಬೆಳೆದಿದ್ದರೆ ಅದಕ್ಕೆ ಆಶೀರ್ವಾದ ಮಾಡಿದ್ದು ಯಡಿಯೂರಪ್ಪ ಅವರು, ಇಂಥ ದೊಡ್ಡ‌ ಮನಸ್ಸಿನ ನಾಯಕ ಹುಡುಕಿದರೂ‌ ಸಿಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಅವರನ್ನು ಹಾಡಿ ಹೊಗಳಿದ್ದಾರೆ.

ಶಿಕಾರಿಪುರದಲ್ಲಿ‌ ನಡೆದ ರೈತಾಭಿಮಾನ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರು ಬಡವರು ಬಗ್ಗೆ ದೀನ‌ದಲಿತರ ಬಗ್ಗೆ ಕಾಳಜಿ ಇರುವವರಾಗಿದ್ದಾರೆ. ನನ್ನನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅಧಿಕಾರವನ್ನು ನೀಡಿದ್ದಾರೆ. ನನ್ನನ್ನು ಜಲಸಂಪನ್ಮೂಲ‌ ಸಚಿವವನ್ನು ಮಾಡಿ ನೀರಾವರಿ ಯೋಜನೆ ರೂಪಿಸುವ ಕೆಲಸ ಮಾಡಿಸಿದವರು.ಭದ್ರಾ ಮೇಲ್ದಂಡೆ ಯೋಜನೆಯನ್ನು ನನ್ನ ಅವಧಿಯಲ್ಲೇ ಮಾಡಿದ್ದು ಎಂಬ ಸಂತಸ ನನಗಿದೆ. ಭದ್ರಾ ಮೇಲ್ದಂಡೆ ಯೋಜನೆ ಇದೀಗ ರಾಷ್ಟ್ರೀಯ ಯೋಜನೆಯಾಗುತ್ತಿದೆ. ಇದರ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *