ಕೊಪ್ಪ: ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆಯ (ಟಿಸಿಎಸ್) ವ್ಯವಸ್ಥಾಪಕ ನಿರ್ದೇಶಕ ಗಾಡ್ವಿನ್ ಜಯಪ್ರಕಾಶ್ ಅವರನ್ನು ಮಾರ್ಚ್ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.
ಗಾಡ್ವಿನ್ ಜಯಪ್ರಕಾಶ್ ಅವರು ಸಂಸ್ಥೆಯ ಕಾರ್ಮಿಕರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯ ಚಿಕ್ಕಮಗಳೂರು ಘಟಕದ ಅಧಿಕಾರಿಯು 2020ರ ಫೆಬ್ರುವರಿ 18ರಂದು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
2018ರ ಅಕ್ಟೋಬರ್‌ನಿಂದ 2019ರ ಡಿಸೆಂಬರ್‌ವರೆಗೆ ಸಿಬ್ಬಂದಿ ಸಂಬಳದಲ್ಲಿ ಕಡಿತ ಮಾಡಿದ ಪಿಎಫ್ ಮೊತ್ತವನ್ನು ಪಿಎಫ್ ಕಚೇರಿಗೆ ಸಂದಾಯ ಮಾಡದೆ ನಂಬಿಕೆ ದ್ರೋಹ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ದೂರಿನಲ್ಲಿ ಮನವಿ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

