Breaking News

ಜಿಲ್ಲಾ ಆಸ್ಪತ್ರೆಯಲ್ಲಿ ಕಲ್ಲಪ್ಪ- ರತ್ನವ್ವ ದಂಪತಿ ಭೇಟಿ ಮಾಡಿದ ಜಿಲ್ಲಾಧಿಕಾರಿ-ಡಾ.ಬೊಮ್ಮನಹಳ್ಳಿ

ದಂಪತಿಯ ಧೈರ್ಯಕ್ಕೆ ಮೆಚ್ಚುಗೆಬೆಳಗಾವಿ: .ಪ್ರವಾಹದಿಂದ ರಕ್ಷಿಸಲಾಗಿರುವ ತಾಲ್ಲೂಕಿನ ಕಬಲಾಪುರ ಗ್ರಾಮದ ಕಲ್ಲಪ್ಪ-ರತ್ನವ್ವ ದಂಪತಿಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ ರತ್ನವ್ವ, “ಜೀವರಕ್ಷಣೆಗಾಗಿ ಮನೆಯ ಮೇಲೆ ಕುಳಿತುಕೊಂಡಿದ್ವಿ. ಮನೆಯೂ ನೀರಿನಲ್ಲಿ ಕೊಚ್ಚಿ ಹೋದಾಗ ಇಬ್ಬರೂ ಕೆಳಕ್ಕೆ ಬಿದ್ದಾಗ ನನ್ನ ಸ್ಥಿತಿ ಕಂಡು ಗಂಡ ಅಳತೊಡಗಿದರು. ಆದಾಗ್ಯೂ ಸಾವರಿಸಿಕೊಂಡು ಪಕ್ಕದಲ್ಲೇ ಇದ್ದ ಮಾವಿನ ಮರವನ್ನು ಏರಿದೇವು” ಎಂದು ತಿಳಿಸಿದರು.ಮೂರು ದಿನಗಳ ಕಾಲ ಉಪವಾಸವಿದ್ದು, ತಮ್ಮನ್ನು ರಕ್ಷಿಸುವಂತೆ ಬುಧವಾರ ರಾತ್ರಿ ಬಾಯಿಯಿಂದ ಸೀಟಿ ಹೊಡೀತಾ ಇದ್ವಿ.ಇಬ್ಬರು ಮಕ್ಕಳಿದ್ದಾರೆ. ಮಗಳ ಮದುವೆಯಾಗಿದ್ಧು, ಹುಡುಗ ಅಜ್ಜಿಯ ಮನೆಯಲ್ಲಿದ್ದಾನೆ ಎಂದು ರತ್ನವ್ವ ತಿಳಿಸಿದರು.ಈಜು ಬರುತ್ತಿದ್ದರೂ ಪತ್ನಿಯ ಜತೆಯೇ ಮರವೇರಿ ಕುಳಿತ ಪೊಲಿಯೋ ಪೀಡಿತ ಕಲ್ಲಪ್ಪ ಹಾಗೂ ರತ್ನವ್ವ ಅವರ ಧೈರ್ಯವನ್ನು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಡಾ.ರಾಜೇಂದ್ರ ಕೆ.ವಿ. ಮೆಚ್ಚುಗೆ ವ್ಯಕ್ತಪಡಿಸಿದರು.ದಂಪತಿಯ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಯಾವುದೇ ರೀತಿಯ ಸಮಸ್ಯೆ ಇಲ್ಲ; ಚಳಿಯಿಂದ ರಕ್ಷಣೆ ನೀಡಲು ವಾರ್ಮರ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ನಿರ್ದೇಶಕ ಡಾ.ಎಸ್.ಟಿ.ಕಳಸದ ತಿಳಿಸಿದರು.ದಂಪತಿ ಸಂಪೂರ್ಣ ಗುಣಮುಖರಾಗುವರೆಗೆ ಎಲ್ಲ ಅಗತ್ಯ ಚಿಕಿತ್ಸೆ ಮತ್ತು ಸೌಲಭ್ಯವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *