Breaking News

ತಂದೆಯ ಕಣ್ಣು ಮುಂದೆ ಪ್ರಾಣಿ ಬಿಟ್ಟ ಮಗ


ದೊಡ್ಡಬಳ್ಳಾಪುರ : ಕಾಲೇಜ್​ಗೆ ತೆರಳುತ್ತಿದ್ದ ತಂದೆ-ಮಗನ ಬೈಕ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪನ ಎದುರೇ ಮಗ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಈ ರಸ್ತೆ ಅಪಘಾತ ನಡೆದಿದ್ದು, ಅಂಬಲಗೆರೆಯ ನಿವಾಸಿ ವರುಣ್ (18) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಂದೆ ಸಿದ್ದಲಿಂಗಪ್ಪ (54) ಗಾಯಗೊಂಡಿದ್ದಾರೆ.

ಮೃತ ಯುವಕ ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಕಾಲೇಜಿಗೆ ತನ್ನ ತಂದೆಯ ಜೊತೆ ಬೈಕ್​ನಲ್ಲಿ ಬರುತ್ತಿದ್ದಾಗ ಮುಂಭಾಗದಿಂದ ಬಂದ ಕ್ಯಾಂಟರ್ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಚಾಲಕನನ್ನ ಗ್ರಾಮಸ್ಥರು ಹಿಡಿದು ಪೊಲೀಸ್​ ವಶಕ್ಕೆ ನೀಡಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *