ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆ. ಈ ಅರಮನೆ ದಸರಾ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ರಾತ್ರಿ ವೇಳೆ ನಿಗದಿತ ಅವಧಿಯಲ್ಲಿ ವಿದ್ಯುದ್ದೀಪಗಳಿಂದ ಮಿನುಗುತ್ತಾ ಗಮನಸೆಳೆಯುತ್ತದೆ. ಈ ಸುಂದರ ದೃಶ್ಯಗಳನ್ನು ಸವಿಯಲೆಂದೇ ಪ್ರವಾಸಿಗರು ಅರಮನೆಯತ್ತ ನೆರೆಯುತ್ತಾರೆ.
ಅರಮನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡಿದ್ದು, ಈ ಬಲ್ಬ್‌ಗಳು ಹಲವು ಕಾರಣಗಳಿಗೆ ಹಾಳಾಗುತ್ತವೆ. ಅಂತಹ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ ಪ್ರತಿವರ್ಷವೂ ದಸರಾ ಸಂದರ್ಭ ನಡೆಯುತ್ತದೆ. ಅದರಂತೆ ಈ ಬಾರಿಯೂ ಅರಮನೆಯ ವಿದ್ಯುದ್ದೀಪಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಅರಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸವೂ ನಡೆಯುತ್ತಿದೆ.
ಅರಮನೆ ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ದೀಪ ಇವತ್ತಿನದಲ್ಲ. ಅದು ಶಾಶ್ವತ ದೀಪಾಲಂಕಾರವಾಗಿದ್ದು, ಸದ್ಯ ಹಾಳಾಗಿರುವ 24,500ಕ್ಕೂ ಹೆಚ್ಚು ಬಲ್ಬ್‌ಗಳನ್ನು ಬದಲಿಸುವ ಕಾರ್ಯವನ್ನು ಕಳೆದ 15 ದಿನದಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ಮಾಡುತ್ತಿದ್ದಾರೆ. ಸದ್ಯ ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವ ಒಟ್ಟು ಒಂದು ಲಕ್ಷ ಬಲ್ಬ್ ಗಳನ್ನು ಪರೀಕ್ಷಿಸಿ ಕೆಟ್ಟುಹೋದ ಬಲ್ಭ್ ಗಳನ್ನು ತೆಗೆದು ಹೊಸದನ್ನು ಅಳವಡಿಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





