ಬೆಂಗಳೂರು : ಸಮಗ್ರ ಆರ್ಥಿಕ ಬೆಳಣಿಗೆಯಲ್ಲಿ 2025 ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯ ವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಕರ್ನಾಟಕ ವಿಷನ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ 1.5 ಟ್ರಿಲಿಯನ್ ಡಾಲರ್ ಗಳ ಕೊಡುಗೆ ಕರ್ನಾಟಕ ನೀಡಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು. 2025 ಎನ್ನುವಷ್ಟರಲ್ಲಿ ಆರ್ಥಿಕತೆ ವೇಗ ಪಡೆದುಕೊಂಡಿರುತ್ತದೆ. ಪ್ರಧಾನ ಮಂತ್ರಿಗಳ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ 1.5 ಟ್ರಿಲಿಯನ್ ಡಾಲರ್ ಗಳ ಕೊಡುಗೆ ಕರ್ನಾಟಕ ನೀಡಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

