ಹುಬ್ಬಳ್ಳಿ : ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 26 ರಿಂದ ಏಪ್ರಿಲ್ 2 ವರಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
25 ಈಸಮರ್ಥನಂ ಸಂಸ್ಥೆಯ ಧಾರವಾಡ ಕೇಂದ್ರವು ವಿಕಲಚೇತನ ಅಭ್ಯರ್ಥಿಗಳಿಗಾಗಿ ಮಾರ್ಚ್ 26 , 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ವರೆಗೆ ಧಾರವಾಡದ ಪಿ ಬಿ ರಸ್ತೆಯ ಟೋಲಾಖಾ ಬಳಿಯ ಮಾಡರ್ನಾಲ್‌ನಲ್ಲಿ ಉದ್ಯೋಗಮೇಳವನ್ನು ಆಯೋಜಿಲಾಗಿದೆ.
ಎಸ್ ಎಸ್ ಎಲ್ ಸಿ , ಪಿಯುಸಿ , ಐಟಿಐ , ಡಿಪ್ಲೊಮಾ ಅಥವಾ ಪದವಿ ಹೊಂದಿರುವವರ ವಿದ್ಯಾರ್ಹತೆಯೊಂದಿಗೆ 18 ರಿಂದ 35 ವರ್ಷವಯಸ್ಸಿನ ಸುಮಾರು 500 ಕ್ಕೂ ಹೆಚ್ಚು ನುರಿತ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ . ಈ ಉದ್ಯೋಗಮೇಳದಲ್ಲಿ 25 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ .ಸುದ್ದಿಗೋಷ್ಠಿಯಲ್ಲಿ ವಿನಯಕುಮಾರ್ ಭಾಗಣ್ಣವರ, ಕೃಷ್ಣ ಲಮಾಣೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

